ಪರಿಯಾಲ್ತಡ್ಕದಲ್ಲಿ ಪಾದ್ರಿಯಿಂದ ವೃದ್ಧ ದಂಪತಿಗೆ ಹಲ್ಲೆ: ವೀಡಿಯೊ ವೈರಲ್

Spread the love

ಪರಿಯಾಲ್ತಡ್ಕದಲ್ಲಿ ಪಾದ್ರಿಯಿಂದ ವೃದ್ಧ ದಂಪತಿಗೆ ಹಲ್ಲೆ: ವೀಡಿಯೊ ವೈರಲ್
 

ವಿಟ್ಲ: ಚರ್ಚ್ ನ ಧರ್ಮಗುರುವೊಬ್ಬರು ವೃದ್ಧ ದಂಪತಿಗೆ ಹಲ್ಲೆ ನಡೆಸಿರುವ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪುಣಚ ಗ್ರಾಮದ ಪರಿಯಾಲ್ತಡ್ಕ ಎಂಬಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದ್ದು, ಈ ಕುರಿತಾದ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮನೇಲ ಪರಿಯಾಲ್ತಡ್ಕದ ಕ್ರೈಸ್ಟ್ ಕಿಂಗ್ ಪ್ಯಾರಿಷ್ ನ ಪಾದ್ರಿ ನೆಲ್ಸನ್ ಒಲಿವೆರಾ ಹಲ್ಲೆ ಆರೋಪಿ ಎನ್ನಲಾಗಿದೆ. ವೃದ್ಧ ದಂಪತಿ ಮತ್ತು ಪಾದ್ರಿ ಮಧ್ಯೆ ಯಾವ ವಿಚಾರದಲ್ಲಿ ಗಲಾಟೆ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಹಲ್ಲೆ ಬಗ್ಗೆ ಸಂತ್ರಸ್ತ ದಂಪತಿ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಫೆ.29ರಂದು ಈ ಘಟನೆ ನಡೆದಿರುವುದು ವೈರಲ್ ಆಗಿರುವ ಸಿಸಿಟಿವಿ ಕ್ಯಾಮರಾದ ವೀಡಿಯೊದಿಂದ ತಿಳಿದುಬರುತ್ತದೆ.

ಪಾದ್ರಿ ನೆಲ್ಸನ್ ಒಲಿವೆರಾ ಮನೆ ಆಶೀರ್ವಾದಕ್ಕೆ ತೆರಳಿದ ವೇಳೆ ಮನೆಯ ಹೊರಗೆ ವೃದ್ಧ ದಂಪತಿ ಜೊತೆ ವಾಗ್ವಾದ ನಡೆಸಿದ ಬಳಿಕ ಹಲ್ಲೆ ನಡೆಸುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ.

ವೀಡಿಯೊದಲ್ಲಿ ಪಾದ್ರಿಯು ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿ, ಕುತ್ತಿಗೆ ಪಟ್ಟಿ ಹಿಡಿದು ಎಳೆದೊಯ್ದು ತೀವ್ರ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪತಿಯ ರಕ್ಷಣೆಗೆ ಮುಂದಾದ ಮಹಿಳೆಗೆ ಪಾದ್ರಿ ಒದೆಯುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಸೆರೆಯಾಗಿದೆ.

ಈ ಬಗ್ಗೆ ಹಲ್ಲೆಗೊಳಗಾದ ದಂಪತಿ ವಿಟ್ಲ ಠಾಣೆಗೆ ದೂರು ನೀಡಿದ್ದು, ವಿಚಾರಣೆ ಮುಂದುವರಿದಿದೆ ಎಂದು ತಿಳಿದುಬಂದಿದೆ.


Spread the love