ಪಲಿಮಾರು ಪರ್ಯಾಯಕ್ಕೆ ಕ್ಷಣಗಣನೆ ಆರಂಭ; ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ದೇವಳ ನಗರಿ

Spread the love

ಪಲಿಮಾರು ಪರ್ಯಾಯಕ್ಕೆ ಕ್ಷಣಗಣನೆ ಆರಂಭ; ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ದೇವಳ ನಗರಿ

ಉಡುಪಿ: ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ 2ನೇ ಪರ್ಯಾಯ ಪೀಠಾರೋಹಣದ ಅಭೂತಪೂರ್ವ ಕ್ಷಣಕ್ಕೆ ಉಡುಪಿ ಸಜ್ಜಾಗಿದೆ.

ಉತ್ಸವಕ್ಕಾಗಿ ಸಿದ್ಧತೆ ಭರದಿಂದ ಸಾಗುತ್ತಿದ್ದು, ನಗರವಿಡೀ ವಿದ್ಯುತ್ ದೀಪ, ಧ್ವಜಗಳು, ಸ್ವಾಗತ ಕಮಾನುಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದೆ ಎಂದರು.

18ರಂದು ಬೆಳಗ್ಗಿನ ಜಾವ 3ಕ್ಕೆ ಜೋಡುಕಟ್ಟೆಯಿಂದ ವೈಭವದ ಪರ್ಯಾಯೋತ್ಸವ ಮೆರವಣಿಗೆ ನಡೆಯಲಿದ್ದು, ಶ್ರೀ ಕೃಷ್ಣಮಠ ಪರ್ಯಾಯ ಇತಿಹಾಸದಲ್ಲಿ 2ನೇ ಬಾರಿಗೆ ಮೆರವಣಿಗೆ ಮಾರ್ಗವನ್ನು ಬದಲು ಮಾಡಲಾಗಿದೆ. ಕವಿಮುದ್ದಣ್ಣ ಮಾರ್ಗವಾಗಿ ಕನಕದಾಸ ರಸ್ತೆ ಮೂಲಕ ಮೆರವಣಿಗೆ ರಥಬೀದಿಗೆ ತಲುಪಲಿದೆ. ಮೆರವಣಿಗೆಯಲ್ಲಿ ಶ್ರೀ ಪಲಿಮಾರು ಮಠದ ಪಟ್ಟದ ದೇವರು ಹಾಗು ಅಷ್ಟಮಠಾಧೀಶರೊಂದಿಗೆ ವಿದ್ವಾಂಸರು,ಗಣ್ಯರು ಪಾಲ್ಗೊಳ್ಳಲಿದ್ದಾರೆ.

18ರಂದು ಪೀಠಾರೋಹಣ: 18ರಂದು ಬೆಳಗ್ಗೆ 6.35ರ ಸುಮೂರ್ತದಲ್ಲಿ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ಬಳಿಕ ಅರಳುಗದ್ದುಗೆಯಲ್ಲಿ ಸಾಂಪ್ರದಾಯಿಕ ವಿಧಿವಿಧಾನ ಬಳಿಕ ರಾಜಾಂಗಣದಲ್ಲಿ ವೈಭವದ ಪರ್ಯಾಯ ದರ್ಬಾರ್ ಪ್ರಾರಂಭಗೊಳ್ಳಲಿದೆ. ಈ ದರ್ಬಾರ್​ನಲ್ಲಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಅಭಿವಂದಿಸಲಿದ್ದು, ಧರ್ಮಸ್ಥಳ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆಯವರನ್ನು ಗೌರವಿಸಲಿದ್ದಾರೆ ಎಂದರು. ದರ್ಬಾರ್ ಬಳಿಕ ಶ್ರೀಕೃಷ್ಣನಿಗೆ ಲಕ್ಷತುಳಸಿ ಅರ್ಚನೆ ನಡೆಯಲಿದೆ. ಜ.17 ಸಾಯಂಕಾಲ 7 ಗಂಟೆಗೆ ರಥಬೀದಿ ಶ್ರೀಪರ ವಿದ್ಯಾಮಂಟಪದಲ್ಲಿ ಐತಿಹಾಸಿಕ ಪಂಚಮ ಪರ್ಯಾಯವನ್ನು ಯಶಸ್ವಿಯಾಗಿ ಮುಗಿಸಿದ ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರಿಗೆ ಅಭಿವಂದನೆ ಕಾರ್ಯಕ್ರಮ ನಡೆಯಲಿದೆ.

ಶನಿವಾರ (ಜ 18) ನಡೆಯಲಿರುವ ಉಡುಪಿ ಅಷ್ಠಮಠಗಳಲ್ಲೊಂದಾದ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ಶ್ರೀಗಳ ಪರ್ಯಾಯ ಮಹೋತ್ಸವಕ್ಕೆ ಎಲ್ಲಾ ಸಿದ್ದತೆ ಭರದಿಂದ ಸಾಗುತ್ತಿದೆ. ಉಡುಪಿ ಜಿಲ್ಲಾಡಳಿತ ಪರ್ಯಾಯ ಮಹೋತ್ಸವ ಸಾಂಗವಾಗಿ ನೆರವೇರಲು ಸಕಲ ಸಿದ್ದತೆ ನಡೆಸಿದೆ. ಉಡುಪಿ ಜಿಲ್ಲಾ ಪೊಲೀಸರು ನಗರಕ್ಕೆ ಬರುವ ಮತ್ತು ನಗರದಿಂದ ಹೊರ ಹೋಗುವ ವಾಹನಗಳ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿದ್ದಾರೆ.


Spread the love