ಪವರ್ ಲಿಫ್ಟಿಂಗ್ ನಲ್ಲಿ ಜಾಕ್ಸನ್ ಡಿಸೋಜಾ ವಿಶೇಷ ಸಾಧನೆ

Spread the love

ಪವರ್ ಲಿಫ್ಟಿಂಗ್ ನಲ್ಲಿ ಜಾಕ್ಸನ್ ಡಿಸೋಜಾ ವಿಶೇಷ ಸಾಧನೆ

ಉಡುಪಿ: ಮೂಡಬಿದರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಜಾಕ್ಷನ್ ಡಿಸೋಜಾ ಬಾರಕೂರಿನಲ್ಲಿ ಇತ್ತೀಚೆಗೆ ನಡೆದ ಮಂಗಳೂರು ವಿವಿ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ,ಬೆಸ್ಟ್ ಲಿಫ್ಟರ್ ಪ್ರಶಸ್ತಿ ಹಾಗೂ 3 ನೂತನ ದಾಖಲೆ ನಿರ್ಮಿಸಿದ್ದಾರೆ.

ಅಲ್ಲದೆ ಕೇರಳದ ತ್ರೀಶೂರಿನಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಕಂಚಿನ ಪದಕ ಗಳಿಸಿದ್ದಾರೆ.

ಜಾಕ್ಷನ್ ಡಿಸೋಜಾ ಅವರು ಕುಂದಾಪುರ ಅನಗಳ್ಳಿಯ ಜೊಸೇಫ್ ಡಿಸೋಜಾ ಮತ್ತು ಕಾರ್ಮಿನ್ ಡೀಸೋಜಾ ದಂಪತಿಯ ಪುತ್ರರಾಗಿದ್ದು, ಅಳ್ವಾಸ್ ಕಾಲೇಜಿನ ಪ್ರಮೋದ್ ಹಾಗೂ ಸಾಲಿಗ್ರಾಮದ ಶ್ರೀ ವೀರ ಮಾರುತಿ ಜಿಮ್ ನ ರಾಜೇಂದ್ರ ಗಾಣಿಗ ಅವರಿಂದ ತರಬೇಟಿ ಪಡೆದಿದ್ದಾರೆ.


Spread the love