ಪಾಸ್ ಇಲ್ಲದೆ ಉಡುಪಿ ಜಿಲ್ಲಾ ಗಡಿ ಪವೇಶಕ್ಕೆ ಯತ್ನ – ಪ್ರಕರಣ ದಾಖಲು

Spread the love

ಪಾಸ್ ಇಲ್ಲದೆ ಉಡುಪಿ ಜಿಲ್ಲಾ ಗಡಿ ಪವೇಶಕ್ಕೆ ಯತ್ನ – ಪ್ರಕರಣ ದಾಖಲು

ಕಾರ್ಕಳ: ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯದರ್ಶಿ ಎಂದು ಹೇಳಿಕೊಂಡು ಹೆಬ್ರಿ ಸೋಮೇಶ್ವರದಲ್ಲಿ ಚೆಕ್ ಪೋಸ್ಟ್ ನಲ್ಲಿ ಯಾವುದೇ ಪಾಸ್ ಇಲ್ಲದೆ ಗಡಿ ಪ್ರವೇಶ ಮಾಡಲು ಹೊರಟ ವ್ಯಕ್ತಿಯೋರ್ವರ ಮೇಲೆ ಹೆಬ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕೊರೋನಾ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾ ಗಡಿಯಲ್ಲಿ ಪಾಸ್ ಇಲ್ಲದೆ ಪ್ರವೇಶವಿಲ್ಲ ಎಂದು ಜಿಲ್ಲಾಡಳಿತ ಹೇಳಿದ್ದರೂ ಕೂಡ ಬೆಂಗಳೂರುನಿಂದ ಬಂದಿದ್ದ ಬಿಜೆಪಿ ರಾಜ್ಯ ಕಾರ್ಯದರ್ಶಿ  ರಾಘವೇಂದ್ರ   ಎಂಬವರು ಜಿಲ್ಲೆ ಪ್ರವೇಶಕ್ಕೆ ಅವಕಾಶ ನೀಡುವಂತೆ ಪೊಲೀಸರೊಂದಿಗೆ ಗಲಾಟೆ ನಡೆಸಿದ್ದು, ಮೇ 7ರಂದು ರಾತ್ರಿ 11:00 ಗಂಟೆಗೆ ರಾಘವೇಂದ್ರ ಅವರು KA-03-AG-5196 ನೇ ಕಾರಿನಲ್ಲಿ ಚಾಲಕ ಉದಯ ಇವರೊಂದಿಗೆ ಜಿಲ್ಲಾಡಳಿತದ ಪಾಸ್ ಪಡೆಯದೇ ನಿಯಮವನ್ನು ಉಲ್ಲಂಘನೆ ಮಾಢಿ ಸೋಮೇಶ್ವರ ಚೆಕ್ ಪೋಸ್ಟ್ ಬಳಿ ಬಂದು ಮೇ 8 ರ ಸಂಜೆ 4:00 ಗಂಟೆಯ ತನಕ ಸೋಮೇಶ್ವರ ಚೆಕ್ ಪೋಸ್ಟ್ ನ ಬಳಿ ಅನಗತ್ಯವಾಗಿ ತಿರುಗಾಡಿಕೊಂಡು ಮಾಸ್ಕ್ ಧರಿಸದೇ ಕಾಲಹರಣ ಮಾಡಿ ಮಾನವ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕು ಹರಡುವ ಸಾಧ್ಯತೆ ಇದೆ ಎಂದು ತಿಳಿಸಿದರೂ ಸಹ ನಿರ್ಲಕ್ಷತನವನ್ನು ತೋರಿ ಸರಕಾರದ ಅದೇಶವನ್ನು ಉಲ್ಲಂಘನೆ ಮಾಡಿದ್ದರ ಬಗ್ಗೆ ಹೆಬ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯಲ್ಲಿ ಕಲಂ: 269, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


Spread the love