ಪಿಣರಾಯಿ ವಿಜಯನ್ ಅವರಿಗೆ ಸಂಪೂರ್ಣ ಭದ್ರತೆ ನೀಡಲಿದ್ದೇವೆ: ರಮಾನಾಥ ರೈ

Spread the love

ಪಿಣರಾಯಿ ವಿಜಯನ್ ಅವರಿಗೆ ಸಂಪೂರ್ಣ ಭದ್ರತೆ ನೀಡಲಿದ್ದೇವೆ: ರಮಾನಾಥ ರೈ

ಮಂಗಳೂರು: ಪಿಣರಾಯಿ ವಿಜಯನ್ ಅವರು ಒಂದು ರಾಜ್ಯ ಮುಖ್ಯಮಂತ್ರಿ ಅವರು ದೇಶದ ಯಾವುದೇ ರಾಜ್ಯಕ್ಕೆ ಹೋಗುವ ಸಂಪೂರ್ಣ ಹಕ್ಕನ್ನು ಹೊಂದಿದ್ದು, ಅವರಿಗೆ ರಕ್ಷಣೆ ನೀಡುವ ಸಂಪೂರ್ಣ ಜವಾಬ್ದಾರಿ ನಮ್ಮದಾಗಿದೆ ಎಂದು ದಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.

ಶುಕ್ರವಾರ ನಗರದ ಸರ್ಕಿಟ್ ಹೌಸ್ ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಿಣರಾಯಿ ವಿಜಯನ್ ಅವರಿಗೆ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಸಂಪೂರ್ಣ ಭದ್ರತೆಯನ್ನು ನೀಡಲಿದ್ದು, ಅವರು ನಿರ್ಭಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಒಂದು ವೇಳೆ ಅಮಿತ್ ಶಾ ಅವರು ಮಂಗಳೂರಿಗೆ ಬರುವಾಗ ಯಾರಾದರೂ ವಿರೋಧಿಸಿದರೆ ಏನಾಗಬಹುದು ಎಂದು ರೈ ಪ್ರಶ್ನಿಸಿದರು. ಜನರು ಗಾಳಿ ಮಾತುಗಳಿಗೆ ಯಾವುದೇ ರೀತಿಯ ಕಿವಿಗೊಡುವ ಅವಶ್ಯಕತೆಯಿಲ್ಲ. ಜಿಲ್ಲಾಡಳಿತ ಎಲ್ಲಾರೀತಿಯ ವ್ಯವಸ್ಥೆಗಳೊಂದಿಗೆ ಸಜ್ಜಾಗಿದ್ದು, ಜನರಿಗೆ ಹಾಗೂ ಪಿಣರಾಯಿ ವಿಜಯನ್ ಅವರಿಗೆ ಸಂಪೂರ್ಣ ಭದ್ರತೆ ನೀಡಲಿದೆ. ಪಿಯುಸಿ ವಿದ್ಯಾರ್ಥಿಗಳಿಗೆ ಪರಿಕ್ಷೆ ನಡೆಯುತ್ತಿದ್ದು, ಬಸ್ಸು ಮ್ಹಾಲಕರಲ್ಲಿ ಶನಿವಾರ ನಡೆಯಲಿರುವ ಬಂದ್ ಕಾರ್ಯಕ್ರಮಕ್ಕೆ ಬೆಂಬಲಿಸದಂತೆ ತಾನು ವಿನಂತಿ ಮಾಡಿದ್ದೇನೆ ಎಂದರು.

ಜೈಲಿಗೆ ಹೋದವರು ಇಂದು ನಮಗೆ ಸಲಹೆ ನೀಡುತ್ತಿದ್ದಾರೆ, ಬಿಜೆಪಿಯ ನಾಯಕರು ಭೃಷ್ಟಾಚಾರದಲ್ಲಿ ಮುಳುಗಿದ್ದು ಅವರು ಕಾಂಗ್ರೆಸ್ ನಾಯಕರು ಭೃಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಐಟಿ ಡಿಪಾರ್ಟ್ ಮೆಂಟ್ ಮುಂದಿಟ್ಟುಕೊಂಡು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಐಟಿ ಧಾಳಿಗಳು ಸಂಪೂರ್ಣ ರಾಜಕೀಯ ಪ್ರೇರಿತವಾಗಿವೆ ಎಂದರು.


Spread the love