ಪಿಲಿಕುಳ ಕಂಬಳ – ಕೆರೆ ಮುಹೂರ್ತ

Spread the love

ಪಿಲಿಕುಳ ಕಂಬಳ – ಕೆರೆ ಮುಹೂರ್ತ

ಮಂಗಳೂರು: ಹಲವು ವರ್ಷಗಳ ಬಳಿಕ ಪಿಲಿಕುಳ ನಿಸರ್ಗಧಾಮದಲ್ಲಿ ಕಂಬಳ ನಡೆಯಲಿದ್ದು, ಈ ಪ್ರಯುಕ್ತ ಬುಧವಾರ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ, ಮೇಯರ್ ಸುಧೀರ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಕಂಬಳ ಕೆರೆಗೆ ಮುಹೂರ್ತ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಡಾ. ಆನಂದ್, ಪಿಲಿಕುಳ ನಿಸರ್ಗಧಾಮದ ಕಾರ್ಯಕಾರಿ ನಿರ್ದೇಶಕಿ ನೂರ್ ಜಹಾನ್, ಕಂಬಳ ಸಂಘಟನೆಗಳ ಮುಖಂಡರಾದ ದೇವಿ ಪ್ರಸಾದ್ ಶೆಟ್ಟಿ, ಡಾ. ಮೋಹನ್ ಆಳ್ವ, ಮಿಥುನ್ ರೈ ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು ಪಿಲಿಕುಳದಲ್ಲಿ ಕಂಬಳ ನಡೆಸಲು ನವೆಂಬರ್ ಎರಡನೇ ವಾರದಲ್ಲಿ ಕಂಬಳ ಸಮಿತಿಯು ದಿನ ನಿಗಧಿ ಮಾಡಿದೆ. ಈ ಸಂದರ್ಭದಲ್ಲಿ ತುಳು ಉತ್ಸವ ಸೇರಿದಂತೆ ಇತರ ಆಕರ್ಷಣೀಯ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಪಿಲಿಕುಳ ಕಂಬಳ ಕೆರೆಯ ದುರಸ್ತಿ ಕಾಮಗಾರಿ ಚಾಲನೆಗೊಂಡಿತು.

Spread the love
Subscribe
Notify of

0 Comments
Inline Feedbacks
View all comments