ಪಿ.ಎ. ಇಂಜಿನಿಯರಿಂಗ್ ಕಾಲೇಜಿನಲ್ಲಿ ರ್ಯಾಗಿಂಗ್ ವಿರೋಧಿ ಕಾನೂನಿನ ಜಾಗೃತಿ ಕಾರ್ಯಕ್ರಮ

Spread the love

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಂಗಳೂರು ವಕೀಲರ ಸಂಘ ಇವುಗಳ ಸಹಯೋಗದೊಂದಿಗೆ ನಗರದ ಪಿ.ಎ. ಇಂಜಿನಿಯರಿಂಗ್ ಕಾಲೇಜಿನಲ್ಲಿ ರ್ಯಾಗಿಂಗ್ ವಿರೋಧಿ ಕಾನೂನಿನ ಬಗ್ಗೆ ಜಾಗೃತಿ ಕಾರ್ಯಕ್ರಮವು ಆಗಸ್ಟ್ 19 ರಂದು ನಡೆಯಿತು.

2

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶರಾದ ಶ್ರೀ ಡಿ.ಟಿ. ಪುಟ್ಟರಂಗಸ್ವಾಮಿಯವರು “ಪ್ರತೀ ವಿದ್ಯಾರ್ಥಿಯು ರ್ಯಾಗಿಂಗ್ ವಿರೋಧಿ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು” ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀ ಗಣೇಶ ಬಿ ಅವರು ಮಾತನಾಡಿ “ರ್ಯಾಗಿಂಗ್ ಈ ಸಮಾಜದ ಪಿಡುಗು. ಅದನ್ನು ನಿರ್ಮೂಲನೆ ಮಾಡಲು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು” ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮಂಗಳೂರು ಬಾರ್ ಅಸೋಸಿ0iÉುೀಶನ್ ನ ಹಿರಿಯ ವಕೀಲ ಶ್ರೀ ಎ. ಉದಯಾನಂದ ಅವರು ರ್ಯಾಗಿಂಗ್ ಪಿಡುಗಿನ ಪರಿಣಾಮಗಳು ಮತ್ತು ರ್ಯಾಗಿಂಗ್ ವಿರೋಧಿ ಕಾನೂನಿನ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡುತ್ತಾ “ಸುಪ್ರೀಮ್ ಕೋರ್ಟ್ ರ್ಯಾಗಿಂಗ್ ವಿರುದ್ದ ಕಠಿಣ ಕಾನೂನನ್ನು ರೂಪಿಸಿದೆ. ಅದನ್ನು ಕಾನೂನು ಬಾಹಿರ ಚಟುವಟಿಕೆಗೆ ಒಳಪಡಿಸಲಾಗಿದೆ” ಎಂದು ಹೇಳಿದರು.

ಮಂಗಳೂರು ಬಾರ್ ಅಸೋಸಿ0iÉುೀಶನ್ ಕಾರ್ಯದರ್ಶಿಯಾದ ಯಶೋದರ ಪಿ. ಕರ್ಕೇರ, ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ. ಅಬ್ದುಲ್ಲಾ ಇಬ್ರಾಹೀಮ್ ಮತ್ತು ಆಡಳಿತ ನಿರ್ದೇಶಕ ಶ್ರೀ ಕೆ.ಎಂ. ಹನೀಫ್ ಗೌರವ ಅತಿಥಿಗಳಾಗಿ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.

ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಶ್ರೀ. ಅಬ್ದುಲ್ ಶರೀಫ್ ಅವರು ಮಾತನಾಡಿ “ರ್ಯಾಗಿಂಗ್ ನಡೆಯುತ್ತಿರುವ ಸಂದರ್ಭದಲ್ಲಿ ನೋಡುತ್ತಿರುವ ಮೂಕ ಪ್ರೇಕ್ಷಕರು ನಡೆದ ಘಟನೆಯನ್ನು ಅಧಿಕಾರಿಗಳಿಗೆ ತಿಳಿಸಿ ತನ್ನ ಕರ್ತವ್ಯವನ್ನು ಪೂರ್ತಿಕರಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿ ಝೀಶಾನ್ ಮತ್ತು ಜಮೀಲಾ ರೂಹಿ ಕಾರ್ಯಕ್ರಮ ನಿರೂಪಿಸಿದರು. ಇ ಆ್ಯ0ಡ್ ಸಿ ಇ ವಿಭಾಗದ ಅಧ್ಯಾಪಕಿ ಕವಿತಾ ಎಸ್ ಸ್ವಾಗತಿಸಿದರು ಹಾಗೂ ಇ ಆ್ಯ0ಡ್ ಸಿ ಇ ವಿಭಾಗದ ಅಧ್ಯಾಪಕಿ ಬಿನಿಯಾ ಇವರು ವಂದನಾರ್ಪಣೆಗೈದರು.


Spread the love