ಪುತ್ತೂರು ಕಾಲೇಜು ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ದ.ಕ.ಜಿಲ್ಲೆಗೆ ಕಳಂಕ — ಶೌವಾದ್ ಗೂನಡ್ಕ 

ಪುತ್ತೂರು ಕಾಲೇಜು ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ದ.ಕ.ಜಿಲ್ಲೆಗೆ ಕಳಂಕ — ಶೌವಾದ್ ಗೂನಡ್ಕ 

ಪುತ್ತೂರು: ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಅದೇ ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ನಡೆಸಿದ ಸಾಮೂಹಿಕ ಅತ್ಯಾಚಾರ ಪ್ರಕರಣವು “ಶಿಕ್ಷಣ ಕಾಶಿ” ದ.ಕ.ಜಿಲ್ಲೆಗೆ ಬಹುದೊಡ್ಡ ಕಳಂಕವೆಂದು ದ.ಕ.ಜಿಲ್ಲಾ ಎನ್.ಎಸ್.ಯು.ಐ. ಘಟಕದ ಉಪಾಧ್ಯಕ್ಷರಾದ ಶೌವಾದ್ ಗೂನಡ್ಕರವರು ಹೇಳಿದ್ದಾರೆ.

ವಿವೇಕಾನಂದ ಕಾಲೇಜಿನ ಎ.ಬಿ.ವಿ.ಪಿ. ಸಂಘಟನೆಯ ಸದಸ್ಯರಿಂದ ನಡೆದಿರುವ ಈ ಕೃತ್ಯವು ಅವರ ಅನಾಗರಿಕ ಸಂಸ್ಕ್ರತಿಯನ್ನು ಎತ್ತಿ ತೋರಿಸುತ್ತದೆ..ಸಂಸ್ಕಾರದ ಬಗ್ಗೆ ಬೇರೆಯವರಿಗೆ ಪಾಠ ಮಾಡುವ ಬಿ.ಜೆ.ಪಿ.ನಾಯಕರು ಮೊದಲು ತಮ್ಮ ಪಕ್ಷದ ಸದಸ್ಯರಿಗೆ ಸಂಸ್ಕಾರವೇನೆಂದು ಹೇಳಿ ಕೊಡಲಿ.. ಎ.ಬಿ.ವಿ.ಪಿ.ಯವರಿಗೆ ಏನಾದರೂ ನೈತಿಕತೆ ಇದ್ದಲ್ಲಿ ತಮ್ಮ ಸಂಘಟನೆಯ ಸದಸ್ಯರು ಮಾಡಿರುವ ಈ ಹೀನ ಕೃತ್ಯಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು.. ಈಗಾಗಲೇ ಈ ಘಟನೆಯ ಕುರಿತು ಪೋಲಿಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ ತಪ್ಪಿತಸ್ಥರು ಯಾರೇ ಇರಲಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಶೌವಾದ್ ಗೂನಡ್ಕರವರು ಆಗ್ರಹಿಸಿದ್ದಾರೆ.