ಪುತ್ತೂರು: ಬಾಲಕಿಯ ಮೇಲೆ ಅತ್ಯಾಚಾರ – ಆರೋಪಿ ಬಂಧನ

ಪುತ್ತೂರು: ಬಾಲಕಿಯ ಮೇಲೆ ಅತ್ಯಾಚಾರ – ಆರೋಪಿ ಬಂಧನ

ಪುತ್ತೂರು: ಹದಿನೈದು ವರ್ಷದ ಬಾಲಕಿಯನ್ನು ಅತ್ಯಾಚ್ಯಾರಗೈದ ಆರೋಪದ ಮೇಲೆ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಪುತ್ತೂರು ನಿವಾಸಿ ಅಜಿತ್ ಎಂದು ಗುರುತಿಸಲಾಗಿದೆ.

ಆರೋಪಿ ಅಜಿತ್ ಶಾಲೆಗೆ ಹೋಗುವ ಸುಮಾರು ಹದಿನೈದು ವರ್ಷ ಪ್ರಾಯದ ಹುಡುಗಿಗೆ ನಿನ್ನ ತಾಯಿ ತಲೆ ತಿರುಗಿ ಬಿದ್ದಿದ್ದಾರೆಂದು ಸುಳ್ಳು ಹೇಳಿ ಪಳನಿರು ಎಂಬ ನಿರ್ಜನ ಕಾಡಿಗೆ ಪುಸಲಾಯಿಸಿ ಕರೆದುಕೊಂಡು ಹೋಗಿ ಆಕೆಯನ್ನು ಮ್ರಗೀಯ ರೀತಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ.

ಶಾಲೆಗೆ ಹೋಗುವ ಬಾಲಕಿಯನ್ನು ಆರೋಪಿಯು ಕೈ ಹಿಡಿದು ಎಳೆದುಕೊಂಡು ಹೋಗಿ ಬಾಯಿಗೆ ಕೈಯನ್ನು ಅಡ್ಡ ಹಿಡಿದಾಗ ನೊಂದ ಬಾಲಕಿಯು ಪ್ರಜ್ಞೆ ತಪ್ಪಿ ಬಿದ್ದಿದ್ದು ಬಳಿಕ ಸ್ವಲ್ಪ ಹೊತ್ತು ಕಳೆದು ಎಚ್ಚರವಾದಾಗ ಧರಿಸಿದ್ದ ಸಮವಸ್ತ್ರ ಅಸ್ತವ್ಯಸ್ತವಾಗಿ ಬಿದ್ದಿದ್ದು, ನಂತರ ನೊಂದ ಬಾಲಕಿಯು ಆಯಾಸಗೊಂಡು ಮನೆಗೆ ಹೋಗಿ ಮಲಗಿದ್ದನ್ನು ನೋಡಿದ ತಾಯಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬಾಲಕಿಯ ಮೇಲೆ ಅಜಿತ್ ಎಂಬಾತನು ಅತ್ಯಾಚಾರ ಎಸಗಿರುವುದಾಗಿ ದೂರಿನಲ್ಲಿ ತಿಳಿಸಿದ್ದು ಅದರಂತೆ ಆರೋಪಿಯನ್ನು ಬಂಧಿಸಿದ್ದಾರೆ

ಪುತ್ತೂರು ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ.