ಪುತ್ತೂರು: ವಂಚನೆ ಪ್ರಕರಣದ ಆರೋಪಿ ತೆಲಂಗಾಣದಲ್ಲಿ ಬಂಧನ

Spread the love

ಪುತ್ತೂರು: ವಂಚನೆ ಪ್ರಕರಣದ ಆರೋಪಿ ತೆಲಂಗಾಣದಲ್ಲಿ ಬಂಧನ
 
ಪುತ್ತೂರು: ಮೋಸ, ವಂಚನೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತನ್ನ ವಿಳಾಸವನ್ನು ಬದಲಿಸಿ ತಲೆಮರೆಸಿಕೊಂಡಿದ್ದ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಮಹಮ್ಮದ್‌ ಇಕ್ಬಾಲ್‌ ಅಲಿಯಾಸ್‌ ಪ್ರವೀಣ್‌ ಕುಮಾರ್‌ ತೊಮರ್‌ (53) ನನ್ನು ಸಂಪ್ಯ ಠಾಣೆಯ ಪೊಲೀಸರು ತೆಲಂಗಾಣದಲ್ಲಿ ಬಂಧಿಸಿದ್ದಾರೆ.

2008ರಲ್ಲಿ ನಕಲಿ ಕ್ರೆಡಿಟ್‌ ಕಾರ್ಡ್‌ ಬಳಸಿ ಮೋಸ, ವಂಚನೆ ಮಾಡಿರುವ ಕುರಿತು ಪುತ್ತೂರು ಸಂಪ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆರೋಪಿ ವಿರುದ್ಧ ನ್ಯಾಯಾಲಯ ವಾರೆಂಟ್‌ ಹೊರಡಿಸಿತ್ತು.


Spread the love
Subscribe
Notify of

0 Comments
Inline Feedbacks
View all comments