
ಪುಷ್ಪಾನಂದ ಫೌಂಡೇಷನ್ ವತಿಯಿಂದ ಜಿಲ್ಲಾ ಮಟ್ಟದಲ್ಲಿ ವಿದ್ಯಾರ್ಥಿವೇತನ ವಿತರಣೆಗೆ ಚಿಂತನೆ-ಯಶ್‌ಪಾಲ್ ಸುವರ್ಣ
ಉಡುಪಿ: ವಿದ್ಯೆಗೆ ಪ್ರೋತ್ಸಾಹ ನೀಡುವುದರಿಂದ ಯುವಶಕ್ತಿಯನ್ನು ಬಲಿಷ್ಠಗೊಳಿಸಿ ಕ್ರೀಯಾಶೀಲ ಪೀಳಿಗೆಯನ್ನು ರೂಪಿಸಬಹುದಾಗಿದೆ. ಆ ನಿಟ್ಟಿನಲ್ಲಿ ಪುಷ್ಪಾನಂದ ಫೌಂಡೇಷನ್ ಜಾತಿ ಮತ ಬೇದವಿಲ್ಲದೆ ಕಾಪು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಒಂದೂವರೆ ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆ ಹಮ್ಮಿಕೊಂಡಿದ್ದು ಮುಂದಿನ ದಿನಗಳಲ್ಲಿ ಇದನ್ನು ಜಿಲ್ಲಾ ಮಟ್ಟಕ್ಕೂ ವಿಸ್ತರಿಸುವ ಉದ್ದೇಶವಿದೆ. ಇದರ ಪ್ರಯೋಜನ ಪಡೆದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ಫೌಂಡೇಷನ್ ಧ್ಯೇಯೋದ್ದೇಶದ ಈಡೇರಿಕೆಗೆ ಪ್ರಯತ್ನಿಸಬೇಕು ಎಂದು ಪುಷ್ಪಾನಂದ ಫೌಂಡೇಷನ್ ಉಡುಪಿ ಇದರ ಪ್ರವರ್ತಕ ಯಶ್‌ಪಾಲ್ ಸುವರ್ಣ ಹೇಳಿದರು.
ಕಟಪಾಡಿ ಜೆಸಿಐ ಭವನದಲ್ಲಿ ಭಾನುವಾರ ತಮ್ಮ ನೇತೃತ್ವದ ಪುಷ್ಪಾನಂದ ಫಂಡೇಷನ್ ಉಡುಪಿ ವತಿಯಿಂದ ಹಮ್ಮಿಕೊಂಡಿರುವ ವಿದ್ಯಾರ್ಥಿವೇತನ ವಿತರಣೆ ಯೋಜನೆಯ ಕಟಪಾಡಿ, ಕೋಟೆ ಮತ್ತು ಉದ್ಯಾವರ ಗ್ರಾ.ಪಂ ವ್ಯಾಪ್ತಿಯ 125 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಇನ್ನಂಜೆ ಗ್ರಾ.ಪಂ ಮಾಜಿ ಅಧ್ಯಕ್ಷ ಸುಧಾಕರ್ ಡಿ. ಅಮೀನ್ ಪಾಂಗಾಳಗುಡ್ಡೆ, ಕಟಪಾಡಿ ವಿಜಯಾ ಇಂಡಸ್ಟಿçÃಸ್ ಮಾಲಕ ಕೆ ಸತ್ಯೇಂದ್ರ ಪೈ, ಕೋಟೆ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ನ್ಯಾಯವಾದಿ ಗಣೇಶ್ ಕುಮಾರ್ ಮಟ್ಟು, ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚದ ಅಧ್ಯಕ್ಷೆ ವೀಣಾ ಶೆಟ್ಟಿ ಶುಭ ಹಾರೈಸಿದರು
.
ಈ ಸಂದರ್ಭದಲ್ಲಿ ಮೂರು ಗ್ರಾ.ಪಂ ವ್ಯಾಪ್ತಿಯ 125 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ತಾ.ಪಂ ಮಾಜಿ ಸದಸ್ಯ ರಾಜೇಶ್ ಅಂಬಾಡಿ, ಬಿಜೆಪಿ ಜಿಲ್ಲಾ ಪ್ರಕೋಷ್ಠಗಳ ಜಿಲ್ಲಾ ಸಂಚಾಲಕ ವಿಜಯ ಕುಮಾರ್ ಉದ್ಯಾವರ, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೋಪಾಲ್‌ಕೃಷ್ಣ ರಾವ್ ಮಟ್ಟು, ಕಾಪು ಕ್ಷೇತ್ರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಸುವರ್ಣ ಪಿತ್ರೋಡಿ, ಕಾಪು ಕ್ಷೇತ್ರ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಸುಮಾ ಉದಯ ಶೆಟ್ಟಿ, ಉದ್ಯಾವರ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಸಾಲ್ಯಾನ್, ಉದ್ಯಾವರ ಗ್ರಾ.ಪಂ ಸದಸ್ಯ ಜಿತೇಂದ್ರ ಶೆಟ್ಟಿ ಉದ್ಯಾವರ ಉಪಸ್ಥಿತರಿದ್ದರು.
ಯಶ್‌ಪಾಲ್ ಸುವರ್ಣ ಅವರ ಆಪ್ತ ಕಾರ್ಯದರ್ಶಿ ಯತೀಶ್ ಕೋಟ್ಯಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು