ಪೊಲೀಸ್ ಇನ್ಸ್ ಪೆಕ್ಟರ್ ಗೆ ಸಂಸದ ನಳಿನ್ ಬೆದರಿಕೆ ಹಾಕಿದ ವೀಡಿಯೋ ವೈರಲ್

Spread the love

ಪೊಲೀಸ್ ಇನ್ಸ್ ಪೆಕ್ಟರ್ ಗೆ ಸಂಸದ ನಳಿನ್ ಬೆದರಿಕೆ ಹಾಕಿದ ವೀಡಿಯೋ ವೈರಲ್

ಮಂಗಳೂರು: ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಗುರುವಾರ ಮಂಗಳೂರಿನಲ್ಲಿ ಆಯೋಜಿಸಿದ ಬೈಕ್ ಜಾಥಾದ ಪರವಾನಿಗೆ ಸಂಬಂಧಿಸಿ ಕದ್ರಿ ಠಾಣೆಯ ಇನ್ಸ್ ಪೆಕ್ಟರ್ ಒರ್ವರಿಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಬೆದರಿಕೆ ಹಾಕಿದ್ದು, ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳೂರಿನ ಕದ್ರಿ ಠಾಣಾ ಇನ್ಸ್ ಪೆಕ್ಟರ್ ಮಾರುತಿ ನಾಯಕ್ ಅವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೈ ತೋರಿಸಿ ಬೈದು, ಅವರ ಫೋನ್ ಕಿತ್ತುಕೊಳ್ಳಲು ಯತ್ನಿಸಿದ್ದಲ್ಲದೆ ಅರ್ಧ ಗಂಟೆಯಲ್ಲಿ ನಿಮ್ಮ ಹೆಸರನಿನಲ್ಲಿ ಬಂದಿಗೆ ಕರೆ ನೀಡುತ್ತೇನೆ ಎಂದು ಕರ್ತವ್ಯ ನಿರತ ಪೋಲಿಸ್ ಅಧಿಕಾರಿಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಅಲ್ಲದೆ ಏನು ಆಡ್ತಿರಾ? ತೆಗೆದು ಬಿಸಾಕುತ್ತೇನೆ ಎಂಬ ಪದಗಳನ್ನು ಬಳಕೆ ಮಾಡಿದ್ದು, ಸಾರ್ವಜನಿಕರೇ ಎದುರೇ ಮಾರುತಿ ನಾಯಕ್ ಅವರಿಗೆ ಸಂಸದರು ಬೆದರಿಕೆ ಹಾಕಿರುವುದು ವೀಡಿಯೋದಲ್ಲಿ ದಾಖಲಾಗಿದೆ.

ಕೆಲವು ಸಮಯದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಅಂದಿನ ಜಿಲ್ಲಾ ಎಸ್ಪಿ ಭೂಷಣ್ ಬೊರಸೆಗೆ ಐಬಿಗೆ ಕರೆದು ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸುವಂತೆ ಆದೇಶಿಸಿದ ವೀಡಿಯೋ ವೈರಲ್ ಆದಾಗ ಬಿಜೆಪಿ ನಾಯಕರು ಸತತ ಪ್ರತಿಭಟನೆ ಮಾಡಿದ್ದರು. ಈಗ ಬಿಜೆಪಿ ಸಂಸದರೆ ಅಂತಹ ವರ್ತನೆ ತೋರಿರುವುದು ವೈರಲ್ ಆಗಿದೆ.


Spread the love

1 Comment

  1. ಮೇಜ್ ಗುಡ್ಡಿಲೆಕ್ಕ ಬೆರ್ರಿ ಗುಡ್ಡುಲೇ
    ಫೋನ್ ವೊಯ್ತಿ ಲೆಕ್ಕ ಬೆಥಡ್ ಒಯಿ ಪುಲೆ
    ಪೂರಾ ಸಮ ಆಪುಂಡು

Comments are closed.