ಪೊಲೀಸ್ ಇಲಾಖೆಗೆ ಗೌರವ ತಂದ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್  

Spread the love

ಪೊಲೀಸ್ ಇಲಾಖೆಗೆ ಗೌರವ ತಂದ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್  

ರಾಜ್ಯದ ಪೊಲೀಸ್ ಇಲಾಖೆ ಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನೂರಾರು ಪ್ರಕರಣಗಳನ್ನು ಪತ್ತೆ ಹಚ್ಚಿ ದಕ್ಷ, ಪ್ರಾಮಾಣಿಕ, ಧೀರ ಪೊಲೀಸ್ ಅಧಿಕಾರಿ ಎಂಬ ಪ್ರಶಂಸೆಗೆ ಪಾತ್ರರಾದ ಶ್ರೀ ಅನುಪಮ್ ಅಗರವಾಲ್ ರವರನ್ನು ಸರಕಾರವು ಇತ್ತೀಚೆಗಷ್ಟೇ ಮಂಗಳೂರು ನಗರದ ಪೊಲೀಸ್ ಕಮಿಷನರ್ ಆಗಿ ನೇಮಕ ಗೊಳಿಸಿ ಮಹತ್ತರ ಕೊಡುಗೆ ನೀಡಿದೆ.

ಮೂಲತಃ ರಾಜಸ್ಥಾನದವರಾದ ಶ್ರೀ ಅನುಪಮ್ ಅಗರ್ ವಾಲ್ 2008ನೇ ಬ್ಯಾಚಿನ IPS ಅಧಿಕಾರಿ, ರಾಮನಗರ, ವಿಜಯಪುರದಲ್ಲಿ SP ಯಾಗಿಯೂ, ದಾವಣಗೆರೆ ಯಲ್ಲಿ ASP ಯಾಗಿಯೂ, ಬೆಳ್ಗಾಂನಲ್ಲಿ DCP ಯಾಗಿಯೂ, ಈಶಾನ್ಯ ವಲಯದ DIG ಯಾಗಿಯೂ, ಕನಾ೯ಟಕ ಪೊಲೀಸ್ ಅಕಾಡೆಮಿಯ ನಿದೇ೯ಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಗೂಂಡಾಗಿರಿ, ಮತೀಯ ಗಲಭೆ, ಗ್ಯಾಂಬ್ಲಿಂಗ್ ಮುಂತಾದ ಅನಿಷ್ಟ ಚಟುವಟಿಕೆಗಳ ವಿರುದ್ಧ ಸಮರ ಸಾರಿ ತಾನು ಸೇವೆ ಸಲ್ಲಿಸಿದ ಎಲ್ಲಾ ಪ್ರದೇಶಗಳಲ್ಲಿ ದಕ್ಷ, ಪ್ರಾಮಾಣಿಕ, ಧೀರ ಅಧಿಕಾರಿ ಯೆಂಬ ಖ್ಯಾತಿಗೆ ಅನುಪಮ್ ಅಗರ್ ವಾಲ್ ಪಾತ್ರರಾಗಿದ್ದಾರೆ. ಈ ಸಮರ್ಥ ಪೊಲೀಸ್ ಉನ್ನತಾಧಿಕಾರಿಯ ಸೇವೆಯನ್ನು ಮನ್ನಿಸಿದ ಸರಕಾರ ಅವರಿಗೆ ಹಲವು ಬಾರಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿದೆ.

ಶ್ರೀ ಅನುಪಮ್ ಅಗರ್ ವಾಲ್ ಸೇವೆ ಸಲ್ಲಿಸಿದ ಸ್ಥಳಗಳಲ್ಲಿ ಗಲಭೆಗಳಿಲ್ಲ, ದರೋಡೆಗಳಿಲ್ಲ, ಅನ್ಯಾಯ ಅನಾಚಾರಗಳಿಲ್ಲ, ಎಲ್ಲಿ ದರೋಡೆಯಾಗಿದೆಯೋ, ಎಲ್ಲಿ ಕೋಮು ಗಲಭೆಯಾಗಿದೆಯೋ ಅಲ್ಲಿಗೆ ತಕ್ಷಣ ಅನುಪಮ್ ಅಗರ್ ವಾಲ್ ರವರನ್ನು ಸರಕಾರವು ವಿಶೇಷ ಕರ್ತವ್ಯದ ಮೇಲೆ ಕಳುಹಿಸಿ ಕೊಡುತ್ತದೆ. ಇದು ಅವರ ಕಾರ್ಯ ದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ. ಕೇವಲ ಆರು ತಿಂಗಳ ಹಿಂದೆಯಷ್ಟೇ ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಬಂದು ನಗರದಾದ್ಯಂತ ತಲೆ ಎತ್ತಿದ ಕೋಮು ಗಲಭೆ, ಜುಗಾರಿ, ಗೂಂಡಾಗಿರಿ, ಮಸಾಜ್ ಪಾರ್ಲರ್ ಮುಂತಾದ ಸಮಾಜ ಬಾಹಿರ ಚಟುವಟಿಕೆಗಳನ್ನು ಆಮೂಲಾಗ್ರವಾಗಿ ನಿಗ್ರಹಿಸಿ ಜನಮನ್ನಣೆ ಗಳಿಸಿದ ಕುಲದೀಪ್ ಜೈನ್ ರಂತೆ ಅವರ ಹಾದಿಯಲ್ಲಿ ಅನುಪಮ್ ಅಗರ್ ವಾಲ್ ಹೆಜ್ಜೆ ಇಟ್ಟು ಮತ್ತೆ ಅನಿಷ್ಟ ಚಟುವಟಿಕೆಗಳ ವಿರುದ್ಧ ಸಮರ ಸಾರಿ ನಗರದ ಶಾಂತಿ ಸುವ್ಯವಸ್ಥೆ ಯನ್ನು ಕಾಪಾಡಲು ಅಗರ್ ವಾಲ್ ಪ್ರಾಮಾಣಿಕ ವಾಗಿ ಪ್ರಯತ್ನಿಸುತ್ತಿರುವುದು ಅವರ ಕಾರ್ಯದಕ್ಷತೆ ಹಿಡಿದ ಕೈಗನ್ನಡಿಯಾಗಿದೆ.

ಯಾವುದೇ ಅಹಂಭಾವ ಆಡಂಬರಗಳಿಲ್ಲದೆ ಸಂಕಷ್ಟ ಕ್ಕೊಳಗಾದವರ ಪರವಾಗಿ ಸರಕಾರಕ್ಕೂ ನಾಡಿಗೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಶ್ರೀ ಅನುಪಮ್ ಅಗರ್ ವಾಲ್ ರವರನ್ನು ಮಂಗಳೂರಿನ ನಾಗರಿಕರು ಮುಕ್ತ ಕಂಠದಿಂದ ಪ್ರಶಂಶಿಸುತ್ತಾರೆ.

ಬರಹ : ಶೇಖ್ ಪುತ್ತೂರು


Spread the love