ಪೋಕ್ಸೊ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಯ ಮಾಹಿತಿಗೆ ಸಾರ್ವಜನಿಕರಲ್ಲಿ ಪೊಲೀಸರ ಮನವಿ

Spread the love

ಪೋಕ್ಸೊ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಯ ಮಾಹಿತಿಗೆ ಸಾರ್ವಜನಿಕರಲ್ಲಿ ಪೊಲೀಸರ ಮನವಿ

ಉಡುಪಿ: ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೊ ಪ್ರಕರಣವೊಂದರಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿರುವ ಬೈರಂಪಳ್ಳಿ ನಿವಾಸಿ ಪ್ರದೀಪ್ ಶೆಟ್ಟಿ (38) ಬಗ್ಗೆ ಮಾಹಿತಿ ಇದ್ದಲ್ಲಿ ತಿಳಿಸುವಂತೆ ಜಿಲ್ಲಾ ಪೊಲೀಸ್ ಸಾರ್ವಜನಿಕರಲ್ಲಿ ವಿನಂತಿಸಿದೆ.

ಹಿರಿಯಡಕ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 32/2020 ಕಲಂ 354 ಐಪಿಸಿ, pocso act & sc/st act ಪ್ರಕರಣದಲ್ಲಿ ಪ್ರದೀಪ್ ಶೆಟ್ಟಿ ಆರೋಪಿಯಾಗಿದ್ದು ಈತ ಅಗಸ್ಟ್ 25 ರಿಂದ ತಲೆ ಮರೆಸಿಕೊಂಡಿರುತ್ತಾನೆ.

ಈತನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪೊಲೀಸ್ ಉಪಾಧೀಕ್ಷಕರು ಉಡುಪಿ ಮೊಬೈಲ್ ಸಂಖ್ಯೆ 9480805420, ಪೊಲೀಸ್ ವೃತ್ತ ನಿರೀಕ್ಷಕರು ಬ್ರಹ್ಮಾವರ ಮೊಬೈಲ್ ಸಂಖ್ಯೆ – 9480805432, ಪೊಲೀಸ್ ಉಪ ನಿರೀಕ್ಷಕರು ಹಿರಿಯಡಕ ಠಾಣೆ ಮೊಬೈಲ್ ಸಂಖ್ಯೆ – 9480805452 ಮತ್ತು ಜಿಲ್ಲಾ ನಿಸ್ತಂತು ಘಟಕ ಉಡುಪಿ. 0820-2526444 ದೂರವಾಣಿ ಸಂಖ್ಯೆಗೆ ಕರೆ ಮಾಡಲು ಕೋರಲಾಗಿದೆ.

ಆರೋಪಿ ಬಗ್ಗೆ ಸುಳಿವು ನೀಡಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.


Spread the love