ಪೋಲಿಸರ ಮನಗೆ ಕಳ್ಳರು ನುಗ್ಗಿ ರೂ 5.10 ಲಕ್ಷ ಮೌಲ್ಯದ ಸೊತ್ತು ಕಳವು

Spread the love

ಪೋಲಿಸರ ಮನಗೆ ಕಳ್ಳರು ನುಗ್ಗಿ ರೂ 5.10 ಲಕ್ಷ ಮೌಲ್ಯದ ಸೊತ್ತು ಕಳವು

ಉಡುಪಿ: ಮಣಿಪಾಲ ಪೋಲಿಸ್ ವಸತಿಗೃಹದಲ್ಲಿನ ಎರಡು ಮನೆಗಳಿಗೆ ಶನಿವಾರ ರಾತ್ರಿ ನುಗ್ಗಿ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ ಘಟನೆ ವರದಿಯಾಗಿದೆ.
ಶನಿವಾರ ಬೆಳಿಗ್ಗೆ 9.30 ರಿಂದ ಜನವರಿ 15 ರ ಮಧ್ಯಾವಧಿಯಲ್ಲಿ ವಸತಿಗೃಹದ ಬ್ಲಾಕ್ ನಂಬ್ರ 6 ರಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಮುಖ್ಯ ಆರಕ್ಷಕರ 66 ನೇ ಮನೆಯ ಬಾಗಿಲಿನ ಬೀಗದ ಕೊಂಡಿಯನ್ನು ತುಂಡರಿಸಿ ಒಳನುಗ್ಗಿದ ಕಳ್ಳರು ಒಟ್ಟು 176 ಗ್ರಾಮ ಚಿನ್ನಾಭರಣ ಕಳವು ಮಾಡಿ, ಬಳಿಕ 67 ನೇ ನಂಬರಿನ ಮನಗೆ ನುಗ್ಗಿ ರೂ 5000 ನಗದು ಹಾಗೂ ಬೆಳ್ಳಿಯ ಆಭರಣವನ್ನು ಕಳವು ಮಾಡಿದ್ದಾರೆ.
ಕಳವು ಚಿನ್ನಾಭರಣ ಹಾಗೂ ಸೊತ್ತಿನ ಮೌಲ್ಯ ರೂ 5.10 ಲಕ್ಷ ಎಂದು ಅಂದಾಜಿಸಲಾಗಿದ್ದು, ಮಣಿಪಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love