ಪೌರತ್ವ ಕಾಯಿದೆ; ಪ್ರತಿಭಟನಾನಿರತರ ಮೇಲೆ ಲಾಠಿಚಾರ್ಜ್, ಹಲವರು ವಶಕ್ಕೆ

Spread the love

ಪೌರತ್ವ ಕಾಯಿದೆ; ಪ್ರತಿಭಟನಾನಿರತರ ಮೇಲೆ ಲಾಠಿಚಾರ್ಜ್, ಹಲವರು ವಶಕ್ಕೆ

ಮಂಗಳೂರು : ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ನಗರದ ಸ್ಟೇಟ್ ಬ್ಯಾಂಕ್ ಬಳಿ ನಿಷೇಧಾಜ್ಞೆ ಉಲ್ಲಂಘಿಸಿ ಜಮಾಯಿಸಿದ ಗುಂಪೊಂದರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿ ಹಲವರನ್ನು ವಶಕ್ಕೆ ಪಡೆದ ಘಟನೆ ಗುರುವಾರ ನಡೆದಿದೆ.

ಸೆಕ್ಷನ್ 144 ನಡುವೆಯೂ , ಡಿಸೆಂಬರ್ 19 ರಂದು ಮಧ್ಯಾಹ್ನ 2: 30 ರ ಸುಮಾರಿಗೆ ನೆಲ್ಲಿಕೈ ರಸ್ತೆಯ ಜನರ ಗುಂಪು ಘೋಷಣೆಗಳನ್ನು ಕೂಗುತ್ತಾ ಡಿಸಿ ಕಚೇರಿ ಕಡೆಗೆ ಮೆರವಣಿಗೆ ನಡೆಸಿತು. ಈ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ಸುಮಾರು 10 ಜನರನ್ನು ವಶಕ್ಕೆ ತೆಗೆದುಕೊಂಡರು.


Spread the love