ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಅಭಿಯಾನದ ವೇದಿಕೆ ಮತ್ತು ಸಭಾಂಗಣ ಸಿದ್ದತೆ ಪರಿಶೀಲನೆ

Spread the love

ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಅಭಿಯಾನದ ವೇದಿಕೆ ಮತ್ತು ಸಭಾಂಗಣ ಸಿದ್ದತೆ ಪರಿಶೀಲನೆ

ಮಂಗಳೂರು: ನಗರದಲ್ಲಿ ಸೋಮವಾರ ನಡೆಯಲಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನಜಾಗೃತಿ ಅಭಿಯಾನ ದ ವೇದಿಕೆ ಮತ್ತು ಸಭಾಂಗಣ ವನ್ನು ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರು ಉತ್ತರ ಕ್ಷೇತ್ರದ ಶಾಸಕ ಭರತ್ ಕುಮಾರ್ ಶೆಟ್ಟಿ ವೀಕ್ಷಿಸಿ ಸಲಹೆ ಸೂಚನೆ ಗಳನ್ನೂ ನೀಡಿದರು.

ಈ ಸಂಧರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ, ಜಗದೀಶ ಶೇಣವ,ಸಂದೇಶ ಶೆಟ್ಟಿ, ಸಂಜಯ ಪ್ರಭು,. ತಿಲಕ್ ರಾಜ್ ಮತ್ತಿತರರು ಹಾಜರಿದ್ದರು .

ಕರ್ನಾಟಕ ಬಿಜೆಪಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನಜಾಗೃತಿ ಅಭಿಯಾನ ಆಯೋಜಿಸಿದೆ. ಮಂಗಳೂರಿನಲ್ಲಿ ಜನವರಿ 27ರಂದು ಬೃಹತ್ ಸಮಾವೇಶ ನಡೆಯಲಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಲ್ಗೊಳ್ಳಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ 8, ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಜನರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.


Spread the love