ಪ್ರತ್ಯೇಕ ಪ್ರಕರಣ; ಇಬ್ಬರ ಮೇಲೆ ದುಷ್ಕರ್ಮಿಗಳಿಂದ ತಲವಾರು ಧಾಳಿ

Spread the love

ಪ್ರತ್ಯೇಕ ಪ್ರಕರಣ; ಇಬ್ಬರ ಮೇಲೆ ದುಷ್ಕರ್ಮಿಗಳಿಂದ ತಲವಾರು ಧಾಳಿ

ಮಂಗಳೂರು: ಸುರತ್ಕಲ್ ಮತ್ತು ಕೂಳೂರಿನ ಪ್ರತ್ಯೆಕ ಪ್ರಕರಣಗಳಲ್ಲಿ ಇಬ್ಬರು ಯುವಕರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಬುಧವಾರ ನಡೆದಿದೆ.

ಗಾಯಗೊಂಡವರನ್ನು ಕಾವೂರು ನಿವಾಸಿ ಬಶೀರ್ (45) ಮತ್ತು ಬಂದರು ನಿವಾಸಿ ಮುಬಾಶೀರ್ (23) ಎಂದು ಗುರುತಿಸಲಾಗಿದೆ.

ಮುಬಾಶೀರ್ ಎಂಬ ಯುವ ಬಂದರಿನಿಂದ ಸುರತ್ಕಲ್ ಕಡೆಗೆ ತನ್ನ ವಾಹನದಲ್ಲಿ ಬರುತ್ತಿದ್ದಾಗ ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿದ್ದು, ಆತನನ್ನು ನಗರದ ಯುನಿಟಿ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ.

ಇನ್ನೋಂದು ಪ್ರಕರಣದಲ್ಲಿ ಬಶೀರ್ ಎಂಬವರು ಕೊಟ್ಟಾರ ಚೌಕಿಯಲ್ಲಿ ಫಾಸ್ಟ್ ಪುಡ್ ಅಂಗಡಿಯನ್ನು ನಡೆಸುತ್ತಿದ್ದು ಅಲ್ಲಿಗೆ ಬಂದ ದುಷ್ಕರ್ಮಿಗಳು ಅವರ ಅಂಗಡಿಯನ್ನು ಧ್ವಂಸಗೊಳಿಸಿ ಮಾರಾಕಾಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಬಶೀರ್ ಅವರು ಗಂಭೀರವಾಗಿ ಗಾಯಗೊಂಡಿದ್ದು ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರತ್ಯೆಕ ಪ್ರಕರಣಗಳು ದಾಖಲಾಗಿವೆ.


Spread the love