ಪ್ರಭಾಕರ ಭಟ್ಟರಿಗೆ ಜನರು ಸಾಮರಸ್ಯದಿಂದ ಬದುಕುವುದು ಇಷ್ಟವಿಲ್ಲ- ಶೌವಾದ್ ಗೂನಡ್ಕ

ಪ್ರಭಾಕರ ಭಟ್ಟರಿಗೆ ಜನರು ಸಾಮರಸ್ಯದಿಂದ ಬದುಕುವುದು ಇಷ್ಟವಿಲ್ಲ- ಶೌವಾದ್ ಗೂನಡ್ಕ

ಮಂಗಳೂರು: ಯೇಸು ಕ್ರಿಸ್ತರ ಪ್ರತಿಮೆಯನ್ನು ನಿರ್ಮಿಸಬಾರದೆಂದು ಕನಕಪುರದಲ್ಲಿ ಪ್ರತಿಭಟನೆಯನ್ನು ನಡೆಸುತ್ತಿರುವ ಪ್ರಭಾಕರ ಭಟ್ಟರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸಾಮರಸ್ಯವನ್ನು ಹಾಳು ಮಾಡಿದ್ದು ಸಾಕಾಯ್ತ ಇದೀಗ ದೂರದ ಕನಕಪುರದ ಸಾಮರಸ್ಯವನ್ನು ಹಾಳು ಮಾಡಲು ಹೋಗಿದ್ದೀರ ಎಂದು ದ.ಕ.ಜಿಲ್ಲಾ ವಿದ್ಯಾರ್ಥಿ ಕಾಂಗ್ರೆಸ್ ನ ಉಪಾಧ್ಯಕ್ಷರಾದ ಶೌವಾದ್ ಗೂನಡ್ಕರವರು ಪ್ರಶ್ನಿಸಿದ್ದಾರೆ.

ಪ್ರಭಾಕರ ಭಟ್ಟರಿಗೆ ಜನರು ಸಾಮರಸ್ಯದಿಂದ ನೆಮ್ಮದಿಯಾಗಿ ಬದುಕುವುದು ಇಷ್ಟವಿಲ್ಲ ಧರ್ಮಗಳ ನಡುವೆ ಬಿಕ್ಕಟ್ಟನ್ನು ಸೃಷ್ಠಿಸಿ ರಾಜಕೀಯ ಲಾಭವನ್ನು ಪಡೆಯುವುದು ಇವರ ಉದ್ದೇಶವಾಗಿದೆ. “ಸರ್ವೇ ಜನ ಸುಖಿನೋ ಭವಂತು” ಪವಿತ್ರ ಹಿಂದೂ ಧರ್ಮದ ಆಶಯವಾಗಿದೆ ಆದರೆ ಪ್ರಭಾಕರ ಭಟ್ಟರಂತಹ ಪ್ರಚೋದನಕಾರಿ ಭಾಷಣಗಾರರು ಹಿಂದೂ ಧರ್ಮದ ಆಶಯಗಳಿಗೆ ಧಕ್ಕೆಯುಂಟು ಮಾಡುತ್ತಿದ್ದಾರೆ. ನಾನು ಪವಿತ್ರ ಭಗವದ್ಗೀತೆಯನ್ನು ಪೂರ್ತಿಯಾಗಿ ಒದದಿದ್ದರೂ ಕೆಲವು ಪ್ರಮುಖ ಅಂಶಗಳನ್ನು ಅರಿತುಕೊಂಡಿದ್ದೇನೆ ಅದರಲ್ಲಿ ಮತ್ತೊಂದು ಧರ್ಮವನ್ನು ಧ್ವೇಷಿಸಬೇಕೆಂದು ಎಲ್ಲಿಯೂ ಹೇಳಿಲ್ಲ.ಬೇಕಾದರೆ ಪ್ರಭಾಕರ ಭಟ್ಟರಿಗೆ ನಾನೇ ಖುದ್ದಾಗಿ ಭಗವದ್ಗೀತೆಯನ್ನು ಕಳುಹಿಸಿ ಕೊಡುತ್ತೇನೆ ಅವರು ಅದನ್ನು ಒದಿ ಅರಿತುಕೊಳ್ಳಲಿ ಎಂದು ಶೌವಾದ್ ಗೂನಡ್ಕರವರು ಹೇಳಿದ್ದಾರೆ.

Leave a Reply

  Subscribe  
Notify of