ಪ್ರವಾದಿ ಪೈಗಂಬರ್ ಬಗ್ಗೆ ಅವಹೇಳನ ಆರೋಪ; ಉಡುಪಿ ಸೆನ್ ಠಾಣೆಯಲ್ಲಿ ದೂರು ದಾಖಲು

ಪ್ರವಾದಿ ಪೈಗಂಬರ್ ಬಗ್ಗೆ ಅವಹೇಳನ ಆರೋಪ; ಉಡುಪಿ ಸೆನ್ ಠಾಣೆಯಲ್ಲಿ ದೂರು ದಾಖಲು

ಉಡುಪಿ: ಪ್ರವಾದಿ ಪೈಗಂಬರರು ಹಾಗೂ ಇಸ್ಲಾಂ ಧರ್ಮವನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಅತುಲ್ ಕುಮಾರ್ (ಮಧುಗಿರಿ ಮೋದಿ) ಎಂಬವರ ವಿರುದ್ಧ ಉಡುಪಿ ಸೆನ್ ಠಾಣೆಯಲ್ಲಿ ಮುಸ್ಲಿಂ ಬಾಂಧವರ ಪರವಾಗಿ ಕೆಮ್ಮಣ್ಣು ಹೂಡೆ ನಿವಾಸಿ ಸಲಾಹುದ್ದೀನ್ ಅಬ್ದುಲ್ಲಾಹ್ ದೂರು ದಾಖಲಿಸಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅತುಲ್ ಕುಮಾರ್ ಎಂಬವರು ಮುಸಲ್ಮಾನರ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಪ್ರವಾದಿ ಪೈಗಂಬರರು ಹಾಗೂ ಇಸ್ಲಾಂ ಧರ್ಮದ ಬಗ್ಗೆ ಮಾತನಾಡಿದ್ದು ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.