ಪ್ರಾಮಾಣಿಕ ಚಾಲಕನಿಗೆ ಶ್ರೀ ದುರ್ಗಾಂಬಾ ಸಂಸ್ಥೆಯಿಂದ‌ ಸನ್ಮಾನ

Spread the love

ಪ್ರಾಮಾಣಿಕ ಚಾಲಕನಿಗೆ ಶ್ರೀ ದುರ್ಗಾಂಬಾ ಸಂಸ್ಥೆಯಿಂದ‌ ಸನ್ಮಾನ

ಕುಂದಾಪುರ: ಕಳೆದ ಮೂವತ್ತು ವರ್ಷಗಳಿಂದ ಶ್ರೀ ದುರ್ಗಾಂಬಾ ಸಂಸ್ಥೆಯಲ್ಲಿ ಚಾಲಕನಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಬೆಳ್ಳಾಲ ಶಿವರಾಮ ಪೂಜಾರಿಯವರಿಗೆ ಸಂಸ್ಥೆಯ ವತಿಯಿಂದ ಇಲ್ಲಿನ ಶ್ರೀ ದುರ್ಗಾಂಬಾ ಕಚೇರಿಯಲ್ಲಿ ಸನ್ಮಾನಿಸಲಾಯಿತು.

ಶ್ರೀ ದುರ್ಗಾಂಬಾ ಸಮೂಹ ಸಂಸ್ಥೆಯ ಅಧ್ಯಕ್ಷ ಎಸ್ ಸಚ್ಚಿದಾನಂದ ಚಾತ್ರ ಮಾತನಾಡಿ, 1993 ರಲ್ಲಿ ಶ್ರೀ ದುರ್ಗಾಂಬಾ ಸಂಸ್ಥೆಯಲ್ಲಿ ಕೆರಾಡಿ-ಕುಂದಾಪುರ ಮಾರ್ಗದಲ್ಲಿ ಚಾಲಕ ವೃತ್ತಿ ಆರಂಭಿಸಿದ ಶಿವರಾಮ‌ ಪೂಜಾರಿ ಅವರು ಸಂಸ್ಥೆಗೆ ಕಪ್ಪು ಚುಕ್ಕೆ ಬಾರದಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿ ಸೇವೆಯಲ್ಲಿನ ನಿಷ್ಠೆ, ಪ್ರಾಮಾಣಿಕತೆಯನ್ನು ಗುರುತಿಸಿ ಸಂಸ್ಥೆ ಅಭಿಮಾನದಿಂದ ಅವರನ್ನು ಸನ್ಮಾನಿಸಿದೆ ಎಂದರು.

ಈ ಸಂದರ್ಭ ಸಂಸ್ಥೆಯ ಆಡಳಿತ ಪಾಲುದಾರ ಎಸ್. ಸುಪ್ರೀತ್ ಚಾತ್ರ, ಶ್ರೀ ದುರ್ಗಾಂಬಾ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.


Spread the love