ಪ್ರಿಯಕರನ ಸಾವಿಗೆ ನೊಂದು ಯುವತಿ ಆತ್ಮಹತ್ಯೆ

Spread the love

ಪ್ರಿಯಕರನ ಸಾವಿಗೆ ನೊಂದು ಯುವತಿ ಆತ್ಮಹತ್ಯೆ

ಮಂಗಳೂರು: ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೈದ ಘಟನೆ ಸೋಮವಾರ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಉಳ್ಳಾಲ ಚೆಂಬುಗುಡ್ಡೆಯ ಲಚ್ಚಿಲ್ ನಿವಾಸಿ ರುಬೀನಾ (17) ಎಂದು ಗುರುತಿಸಲಾಗಿದೆ.

ಮಾಹಿತಿಗಳ ಪ್ರಕಾರ ರುಬೀನಾ ಆರ್ಫಾಝ್ ಎನ್ನುವ ಯುವಕನ್ನನ್ನು ಪ್ರೀತಿಸುತ್ತಿದ್ದು 2017 ನವೆಂಬರ್ ನಲ್ಲಿ ಆರ್ಫಾಝ್ ಆತ್ಮಹತ್ಯೆ ಮಾಡಿಕೊಂಡಿದ್ದು ಇದರಿಂದ ನೊಂದಿದ್ದ ರುಬೀನಾ ಜಿಗುಪ್ಸೆಗೊಂಡು ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love