ಪ್ರೊ ಪಿ ರಾಮಕೃಷ್ಣ ಚಡಗರಿಗೆ ಪ್ರಶಸ್ತಿ

Spread the love

ಪ್ರೊ ಪಿ ರಾಮಕೃಷ್ಣ ಚಡಗರಿಗೆ ಪ್ರಶಸ್ತಿ

ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ಡೀನ್ ಪ್ರೊ ಪಿ ರಾಮಕೃಷ್ಣ ಚಡಗ ಇವರಿಗೆ ಇಂಡಿಯನ್ ಸೊಸೈಟಿ ಆಫ್ ಟ್ರೈನಿಂಗ್ ಮತ್ತು ಡೆವಲಪ್ಮೆಂಟ್ ವತಿಯಿಂದ ನೀಡಲಾಗುವ “ಅನುಕರಣೀಯ ಕಲಿಕಾ ವೃತ್ತಿಪರ ಪ್ರಶಸ್ತಿ – 2018 ” ದೊರಕಿದೆ . ಏಪ್ರಿಲ್ 28 ರಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರೊ ಚಡಗ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು .

ಇಸ್ರೋದ ನಿವೃತ್ತ ಅಧಿಕಾರಿಯಾದ ಪ್ರೊ ಚಡಗ ಅವರು ತರಬೇತಿ ಮತ್ತು ಬೆಳವಣಿಗೆ , ಶೈಕ್ಷಣಿಕ ಅಭಿವೃದ್ಧಿ , ಸಮಯ ನಿರ್ವಹಣೆ , ಒತ್ತಡ ನಿರ್ವಹಣೆ ಮೊದಲಾದ ಕಾರ್ಪೊರೇಟ್ ವಿಷಯಗಳ ಬಗ್ಗೆ ನೂರಾರು ತರಬೇತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ . ಅವರು ಐ ಎಸ್ ಟಿ ಡಿ ಯ ಆಜೀವ ಸದಸ್ಯರೂ ಆಗಿದ್ದಾರೆ .


Spread the love