ಫಳ್ನೀರ್: 3.9 ಕೋಟಿ ವೆಚ್ಚದ ರಸ್ತೆ ಕಾಂಕ್ರೀಟಿಕರಣಕ್ಕೆ ಗುದ್ದಲಿ ಪೂಜೆ

Spread the love

ಫಳ್ನೀರ್: 3.9 ಕೋಟಿ ವೆಚ್ಚದ ರಸ್ತೆ ಕಾಂಕ್ರೀಟಿಕರಣಕ್ಕೆ ಗುದ್ದಲಿ ಪೂಜೆ

ಮಂಗಳೂರು: ಫಳ್ನೀರ್ ಎವ್ರಿ ಸರ್ಕಲ್ ನಿಂದ ಫಾದರ್ ಮುಲ್ಲರ್ಸ್ ಆಸ್ಪತ್ರೆಯವರೆಗೆ ಸುಮಾರು 3.9 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 1.15 ಕಿ.ಮೀ ಉದ್ದದ ಕಾಂಕ್ರೀಟ್ ರಸ್ತೆಗೆ ಗುದ್ದಲಿ ಪೂಜೆಯನ್ನು ಶಾಸಕ ಜೆ.ಆರ್.ಲೋಬೊ ನೆರವೇರಿಸಿದರು.

ಇದು ಮಂಗಳೂರಿನ ಪ್ರಮುಖ ರಸ್ತೆಯಾಗಿದ್ದು ವಾಹನ ಸಂಚಾರದಲ್ಲಿ ಜನ ನಿಭಿಡವಾಗಿದೆ. ಈ ರಸ್ತೆಯನ್ನು ಕಾಂಕ್ರೀಟಿಕರಣ ಮಾಡಲು ಅಗತ್ಯವಾಗಿದ್ದು ಸಾರ್ವಜನಿಕರ ಸಹಕಾರ ಕೋರಿದರು.

ಸಮಾರಂಭದಲ್ಲಿ ಮೇಯರ್ ಹರಿನಾಥ್, ಮುಖ್ಯ ಸಚೇತಕರಾದ ಶಶಿಧರ್ ಹೆಗ್ಡೆ, ಆಯುಕ್ತರಾದ ನಜೀರ್, ಮಂಗಳೂರು ಮಹಾನಗರಪಾಲಿಕೆ ಸದಸ್ಯರಾದ ನವೀನ್ ಡಿ’ಸೋಜಾ,ಅಬ್ದುಲ್ ರವೂಫ್, ಅಪ್ಪಿ, ಅಬ್ದುಲ್ ಲತೀಫ್,ಆಶಾ ಡಿ’ಸಿಲ್ವಾ, ಕೆ.ಎಸ್.ಆರ್.ಟಿ.ಸಿ ನಿರ್ದೇಶಕರಾದ ಟಿ.ಕೆ.ಸುಧೀರ್, ರಮಾನಂದ ಪೂಜಾರಿ, ಅಹ್ಮದ್ ಬಾವ ಬಜಾಲ್, ಮಹಾನಗರಪಾಲಿಕೆ ಅಧಿಕಾರಿಗಳಾದ ಲಿಂಗೇಗೌಡ, ಗಣಪತಿ ಮುಂತಾದವರು ಉಪಸ್ಥಿತರಿದ್ದರು.


Spread the love