ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆ – ಚಿಕ್ಕ ಮಗುವಿಗೆ ಪ್ರಮುಖ ಶಸ್ತ್ರಚಿಕಿತ್ಸೆ

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆ – ಚಿಕ್ಕ ಮಗುವಿಗೆ ಪ್ರಮುಖ ಶಸ್ತ್ರಚಿಕಿತ್ಸೆ

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸೆ ಮತ್ತು ನಿಯೋನೆಟೋಲಜಿ ವೈದ್ಯರ ತಂಡವು ಸೆಪ್ಟೆಂಬರ್ 14 ರಂದು ಚಿಕ್ಕ ಮಗುವಿಗೆ ಪ್ರಮುಖ ಶಸ್ತ್ರಚಿಕಿತ್ಸೆ ನಡೆಸಿದರು. ಹೆಚ್ಚಿನ ಅನಿಯಂತ್ರಿತ ಗರ್ಭಧಾರಣಿಯ ಸಂಬಂಧಿತ ಅಧಿಕ ರಕ್ತದೊತ್ತಡದಿಂದ ಉಂಟಾಗುವ ತೊಡಕುಗಳಿಂದಾಗಿ ತಾಯಿಯ ಜೀವ ಉಳಿಸಲು 34 ವರ್ಷದ ಹೆಂಗಸಿಗೆ 30 ವಾರಗಳಲ್ಲಿ ಆಕಾಲಿಕವಾಗಿ ಹೆರಿಗೆ ಮಾಡಲಾಯಿತು.

680 ಗ್ರಾಂ ತೂಕದ ಅಕಾಲಿಕ ಮಗುವಿಗೆ ಎದೆ ಮತ್ತು ಹೊಟ್ಟೆಯ ನಡುವಿನ ಭಾಗದಲ್ಲಿ ಹೊಟ್ಟೆಯ ಪಿತ್ತಜನಕಾಂಗ ಮತ್ತು ಹೃದಯದ ಪಕ್ಕದಲ್ಲಿರುವ ಕರುಳಿನೊಂದಿಗೆ ಎದೆ ಮತ್ತು ಹೊಟ್ಟೆಯ ನಡುವಿನ ವಿಭಜನೆಯಲ್ಲಿ ರಂಧ್ರ (ಜನ್ಮಜಾತ ಡಯಾಫ್ರಾಗ್ಮ್ಯಾಟಿಕ್ ಅಂಡವಾಯು) ಇತ್ತು. ಮಗು ಹೃದಯ ಮತ್ತು ಎಂಡೋಕ್ರೈನ್ ಅಂಗದ ವಿರೂಪತೆಯನ್ನು ಸಹ ಹೊಂದಿತ್ತು. ಮಕ್ಕಳ ಶಸ್ತ್ರಚಿಕಿತ್ಸ ತಜ್ಞ ಡಾ. ಕಿಶನ್ ಶೆಟ್ಟಿ, ನಿಯೋನಾಟಾಲಜಿಸ್ಟ್, ಡಾ.ಸರಿತ, ಡಾ.ಪ್ರವಿಣ್ ಬಿ.ಕೆ., ಡಾ.ಮರಿಯೋ ಮತ್ತು ಅರಿವಳಿಕೆ ವಿಭಾಗದ ಡಾ.ಕಾರ್ಲ್ ತಜ್ಞರವರನ್ನೊಳಗೊಂಡ ವೈದ್ಯರ ತಂಡ ಮಗುವಿಗೆ ಚಿಕಿತ್ಸೆ ನಿಡಿದರು.

ಕಿಬ್ಬೊಟೆಯ ಕಂಟೆಟ್ಸ್ ಮರಳಿ ತರಲಾಯಿತು. ಮತ್ತು ಡಯಾಫ್ರಾಗ್ಮದಲ್ಲಿನ ರಂಧ್ರವನ್ನು ಯಶಸ್ವಿಯಾಗಿ ಮುಚ್ಚಿದ ಅತ್ಯಂತ ತೀವ್ರವಾದ ಹಾಗೂ ಸೂಕ್ತವಾದ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ಒಂದು ಕೆಜಿ ಗಿಂತ ಕಡಿಮೆ ಇರುವ ಶಿಶುಗಳಲ್ಲಿ ಈ ಸರ್ಜರಿಯನ್ನು ಪ್ರಯತ್ನಿಸಲಾಗುವುದಿಲ್ಲ. ಏಕೆಂದರೆ ಸಣ್ಣಮಗುವಾಗಿರುವ ಕಾರಣಗಳಿಂದ ತಾಂತ್ರಿಕವಾಗಿ ಕಷ್ಟಕರವಾಗಿದೆ ಮತ್ತು ಬದುಕುಳಿಯುವ ಸಾಧ್ಯತೆಗಳು ಕಡಿಮೆ. ಜನ್ಮಜಾತ ಡಯಾಫಾಮ್ರ್ಯಾಟಿಕ್ ಆಂಡವಾಯ ಸಾಮಾನ್ಯ ಜನನ ತೂಕದ ಶಿಶುಗಳಲ್ಲಿ ಬದುಕುಳಿಯುವÀ ಪ್ರಮಾಣ ಕಡಿಮೆ ಹೊಂದಿದೆ. ಶಸ್ತ್ರಚಿಕಿತ್ಸೆಯ ನಂತರ ಮಗು ಚೆನ್ನಾಗಿ ಚೇತರಿಸಿಕೊಂಡಿತು ಮತ್ತು ಶಸ್ತ್ರಚಿಕಿತ್ಸೆಯ 3 ದಿನಗಳ ನಂತರ ವೆಂಟಿಲೇಟರ್‍ನಿಂದ ತೆಗೆಯಾಲಾಯಿತು. ಶಸ್ತ್ರಚಿಕಿತ್ಸೆಯ ನಂತರ ಮಗುವಿನ ಸ್ಥಿತಿಯನ್ನು ಸುಧಾರಿಸಲು ವೈದ್ಯರ ತಂಡ ಮತ್ತು ಶುಶ್ರೋಷ ಸಿಭ್ಬಂದಿ ಹಗಲು ರಾತ್ರಿ ಕೆಲಸ ಮಾಡಿದರು.

ಮಗು ಸುಧಾರಿಸಿತು, ಕ್ರಮೇಣ ತೂಕವನ್ನು ಹೆಚ್ಚಿಸಿತು ಮತ್ತು ಜೀವದ 64ನೇ ದಿನದಂದು ತಾಯಿಯ ಕಡೆಗೆ ವರ್ಗಾಯಿಸಲಾಯಿತು. ಇದು ಪ್ರಕಟವಾದ ಸಾಹಿತ್ಯವನ್ನು ಹುಡುಕುವಾಗ ಕಡಿಮೆ ಜನನ ತೂಕದಲ್ಲಿ ಶಸ್ತ್ರಚಿಕಿತ್ಸೆ ಮತ್ತು ಬದುಕುಳಿವ ಅತ್ಯಂತ ಚಿಕ್ಕ ಮಗು ಎಂದು ತೊರುತ್ತದೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿರುವುದರಿಂದ ಮಗುವನ್ನು ಈಗ ಆಸ್ಪತ್ರೆಯಿಂದ ದಿಸ್ಚಾರ್ಜ್ ಮಾಡಲಾಗಿದ್ದು. ಪ್ರಸ್ತುತ ಮಗುವಿನ ತೂಕವು 2 ತಿಂಗಳ ಪೋಸ್ಟ್ ಒಪರೇಷನ್ ನಂತರ 1.5 ಕೆ.ಜಿ. ಆಗಿತ್ತು.

ಡಾಯಫ್ರಗ್ಮಾಟಿಕ್ ಅಂಡವಾಯು 680 ಗ್ರಾಂ ತೂಕದ ಆಕಾಲಿಕ ಮಗು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ “ಸಂಕೀರ್ಣ ಶಸ್ತ್ರಚಿಕಿತ್ಸೆಗೆ” ಒಳಪಟ್ಟಿತು.