ಬಂಟರ ಯಾನೆ ನಾಡವರ ಮಾತೃ ಸಂಘದ ಪದಾಧಿಕಾರಿಗಳ ಆಯ್ಕೆ

Spread the love

ಬಂಟರ ಯಾನೆ ನಾಡವರ ಮಾತೃ ಸಂಘದ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮಂಗಳೂರಿನಲ್ಲಿ ಶುಕ್ರವಾರ ನಡೆಯಿತು.

bunts

ಚುನಾವಣಾ ಆಯೋಗ ಪದಾಧಿಕಾರಿಗಳ ಆಯ್ಕೆಗೆ ಬಂಟ್ಸ್ ಹಾಸ್ಟೆಲ್ ಬಳಿಯ ಅಮೃತೋತ್ಸವ ಕಟ್ಟಡದಲ್ಲಿ ಕಾರ್ಯಸೂಚಿಯನ್ನು ಸಿದ್ದಪಡಿಸಿ ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸಿತ್ತು. ಉಪಾಧ್ಯಕ್ಷರಾಗಿ ಕೆಂಚನೂರು ಸೋಮಶೇಖರ ಶೆಟ್ಟಿ (ಕುಂದಾಪುರ), ಕಾರ್ಯದರ್ಶಿಯಾಗಿ ವಸಂತ ಶೆಟ್ಟಿ (ಮಂಗಳೂರು), ಕೋಶಾಧಿಕಾರಿಯಾಗಿ ರವೀಂದ್ರನಾಥ ಶೆಟ್ಟಿ (ಮಂಗಳೂರು), ಜತೆ ಕಾರ್ಯದರ್ಶಿಯಾಗಿ ಕಾವು ಹೇಮನಾಥ ಶೆಟ್ಟಿ (ಪುತ್ತೂರು ತಾಲೂಕು), ನಾಮಪತ್ರ ಸಲ್ಲಿಸಿದ್ದು ಬಳಿಕ ಅವರು ಅವಿರೋಧವಾಗಿ ಆಯ್ಕೆಗೊಂಡರು. ಚುನಾವಣಾಧಿಕಾರಿಗಳಾದ ಪೃಥ್ವೀರಾಜ ರೈ ಮತ್ತು ಉಮೇಶ್ ಶೆಟ್ಟಿ, ಪ್ರಕಿಯೆ ನಡೆಸಿಕೊಟ್ಟರು. ಲಾವಣ್ಯ ಶೆಟ್ಟಿ ಪ್ರಸ್ತಾವನೆಗೈದರು.

ಅವಿರೋಧವಾಗಿ ಆಯ್ಕೆಗೊಂಡ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಚುನಾವಣಾಧಿಕಾರಿಗಳು ಅಭಿನಂದಿಸಿದರು. ಸಭೆಯಲ್ಲಿ ಎಲ್ಲಾ ಪದಾಧಿಕಾರಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಿಗೆ ಸರ್ಟಿಫಿಕೇಟ್ ನೀಡಲಾಯಿತು. ಸಂಘದ ಅಧ್ಯಕ್ಷ ಅಜಿತ್‍ಕುಮಾರ್ ರೈ ಮಾಲಾಡಿ ಅವರು ಚುನಾವಣಾಧಿಕಾರಿಗಳ ಕರ್ತವ್ಯಕ್ಕೆ ಶಾಘನೆಯನ್ನು ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.

ಸಭೆಯಲ್ಲಿ ಚುನಾವಣಾಧಿಕಾರಿಗಳಾದ ಪೃಥ್ವಿರಾಜ್ ರೈ, ಉಮೇಶ್ ಶೆಟ್ಟಿ ಎಸ್, ನವೀನ್ ಶೆಟ್ಟಿ, ರವಿಶಂಕರ್ ಆಳ್ವ, ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್, ಲಾವಣ್ಯ ಶೆಟ್ಟಿ, ಚಂದ್ರಶೇಖರ ಹೆಗ್ಡೆ, ಶಿವರಾಮ ಆಳ್ವ, ಸುಬ್ಬಣ್ಣ ಶೆಟ್ಟಿ, ರಾಜು ಶೆಟ್ಟಿ, ಜಯರಾಮ ರೈ ನಿಕಟಪೂರ್ವ ಕಾರ್ಯದರ್ಶಿ ಮೇಘನಾಥ ಶೆಟ್ಟಿ, ಸಿಎ ಮನಮೋಹನ್ ಶೆಟ್ಟಿ, ಜಯರಾಮ ಸಾಂತ, ಹಾಗೂ ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ನೂತನ ಕಾರ್ಯಕಾರಿ ಸಮಿತಿ ಸದಸ್ಯರು, ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ನವೀನ್ ಶೆಟ್ಟಿ ವಂದಿಸಿದರು.


Spread the love