ಬಂಟ್ವಾಳ : ಅಕ್ರಮ ಗೋ ಸಾಗಾಟ, ಜಾನುವಾರು, ವಾಹನ ವಶ

ಬಂಟ್ವಾಳ : ಅಕ್ರಮ ಗೋ ಸಾಗಾಟ, ಜಾನುವಾರು, ವಾಹನ ವಶ

ಬಂಟ್ವಾಳ :ಅಕ್ರಮವಾಗಿ ಜಾನಾವಾರು ಸಾಗಾಟ ಮಾಡುತ್ತಿದ್ದ ವೇಳೆ ಜಾನುವಾರುಗಳನ್ನು ವಶಪಡಿಸಿಕೊಂಡ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಸಿದ್ಧಕಟ್ಟೆ ಬಿಟ್ ಸಿಬ್ಬಂದಿಯವರು ನೀಡಿದ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಯವರು ಸಿದ್ಧಕಟ್ಟೆ ಕೆರೆಯ ಬಳಿ ಅಸೈನಾರ್ ಅವರ ಮನೆಯ ಹಿಂದಿನ ಗುಡ್ಡೆಯಲ್ಲಿ ಹಾಲು ಕೊಡುವ ಮೂರು ಹಸು, ಎರಡು ಹಸುವಿನ ಕರುಗಳನ್ನೂ ವಶಕ್ಕೆ ಪಡೆದಿದದ್ದಾರೆ.

ಈ ಕುರಿತಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿರುತ್ತದೆ