ಬಂಟ್ವಾಳ: ಅತ್ಯಾಚಾರ ಆರೋಪಿಯ ಬಂಧನ

ಬಂಟ್ವಾಳ: ಅತ್ಯಾಚಾರ ಆರೋಪಿಯ ಬಂಧನ

ಬಂಟ್ವಾಳ: ಬಾಳ್ತಿಲ ಗ್ರಾಮದ ನೀರಪಾದೆಯಲ್ಲಿ ವಿವಾಹ ಆಗುವುದಾಗಿ ಆಮಿಷ ಒಡ್ಡಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ ಆರೋಪಿಯಯನ್ನು ಬಂಟ್ವಾಳ ನಗರ ಠಾಣೆಯ ಪೊಲೀಸರು ಬಂಧೀಸಿದ್ದಾರೆ.

ಬಂಧಿತನನ್ನು ನೀರಪಾದೆ ನಿವಾಸಿ ಕೂಲಿ ಕಾರ್ಮಿಕ ಸುಜಿತ್ ಪೂಜಾರಿ (24) ಎಂದು ಗುರುತಿಸಲಾಗಿದೆ.

ಈತ 19 ರ ಹರೆಯದ ಪ.ಪಜಾತಿಗೆ ಸೇರಿದ ಕೂಲಿ ಕಾರ್ಮಿಕೆಯನ್ನು ವಿವಾಹ ಆಗುವುದಾಗಿ ನಂಬಿಸಿ ಆಕೆಯ ಮೇಲೆ ಎಂಟು ತಿಂಗಳಿನಿಂದ ಅತ್ಯಾಚಾರ ಎಸಗಿ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಪ್ರಕರಣದ ತನಿಖೆಯನ್ನು ಬಂಟ್ವಾಳ ಉಪವಿಭಾಗದ ಎಎಸ್ ಪಿ ನಡೆಸುತ್ತಿದ್ದಾರೆ.