ಬಂಟ್ವಾಳ: ಗುಡ್ಡದ ಹುಲ್ಲುಗಾವಲಿಗೆ ಬೆಂಕಿ, ನಂದಿಸಲು ಹೋದ ದಂಪತಿ ಸಜೀವ ದಹನ

Spread the love

ಬಂಟ್ವಾಳ: ಗುಡ್ಡದ ಹುಲ್ಲುಗಾವಲಿಗೆ ಬೆಂಕಿ, ನಂದಿಸಲು ಹೋದ ದಂಪತಿ ಸಜೀವ ದಹನ
 
ಬಂಟ್ವಾಳ: ಗುಡ್ಡವೊಂದಲ್ಲಿ ಹುಲ್ಲುಗಾವಲಿಗೆ ಬಿದ್ದಿದ್ದ ಬೆಂಕಿ ನಂದಿಸಲು ಹೋದ ದಂಪತಿ ಸಜೀಹ ದಹನಗೊಂಡ ಘಟನೆ ಬಂಟ್ವಾಳ ತಾಲೂಕಿನ ಲೋರೆಟ್ಟೋ ಪದವು ಸಮೀಪದ ತುಂಡುಪದವು ಎಂಬಲ್ಲಿ ರವಿವಾರ ಮಧಾಹ್ನ ವೇಳೆ ನಡೆದಿದೆ.

ತುಂಡುಪದವು ನಿವಾಸಿ, ಗಿಲ್ಬರ್ಟ್ ಕಾರ್ಲೋ(78) ಹಾಗೂ ಕ್ರಿಸ್ಟಿನಾ ಕಾರ್ಲೋ(70) ಮೃತಪಟ್ಟವರು ಎಂದು ತಿಳಿದುಬಂದಿದೆ.

ಇವರ ಮನೆಯ ಸಮೀಪದ ಗುಡ್ಡದಲ್ಲಿರುವ ಹುಲ್ಲುಗಾವಲಿಗೆ ಬೆಂಕಿ ಬಿದ್ದಿದ್ದು, ಅದನ್ನು ನಂದಿಸಲು ಹೋದ ಅವರಿಗೆ ಬೆಂಕಿ ಹತ್ತಿಕೊಂಡಿರಬೇಕು ಎಂದು ಸ್ಥಳೀಯರು ತಿಳಿಸಿದ್ದಾರೆ.

ಬಂಟ್ವಾಳ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.


Spread the love