ಬಂಟ್ವಾಳ : ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ – ಐವರ ಬಂಧನ

50

ಬಂಟ್ವಾಳ : ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ – ಐವರ ಬಂಧನ

ಬಂಟ್ವಾಳ : ಹಣವನ್ನು ಪಣಕ್ಕಿಟ್ಟು ಜುಗಾರಿ ಆಡುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿ ಐದು ಮಂದಿಯನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬಂಧಿತರನ್ನು ವಸಂತ, ಶೀನ, ಯಶೋಧರ, ಶೇಖರ ಮತ್ತು ಕೇಶವ ಪೂಜಾರಿ ಎಂದು ಗುರುತಿಸಲಾಗಿದೆ.

ಮಂಗಳವಾರ  ಸಂಜೆ ಸುಮಾರು 5.00 ಗಂಟೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾವೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಹಿಂಭಾಗದಲ್ಲಿ ಹಣವನ್ನು ಪಣಕ್ಕೆ ಇಟ್ಟು ಜುಗಾರಿ ಆಡುತ್ತಿದ್ದ ಅಡ್ಡೆಯ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ದಾಳಿ ನಡೆಸಿದ್ದು, ದಾಳಿಯಲ್ಲಿ ಜುಗಾರಿ ಆಡುತ್ತಿದ್ದ ಐವರನ್ನು ವಶಕ್ಕೆ ಪಡೆದಿದ್ದು, ಅವರಿಂದ ಇಸ್ಪೀಟು ಎಲೆಗಳು, ಪಣಕ್ಕೆ ಇಟ್ಟಿದ್ದ 5,120/- ರೂ ಹಣವನ್ನು ವಶಕ್ಕೆ ಪಡೆಯಲಾಗಿದೆ,

ದಾಳಿಯಲ್ಲಿ ಬಂಟ್ವಾಳ ಠಾಣಾಧಿಕಾರಿ ಪ್ರಸನ್ನ. ಎಂ.ಎಸ್, ಹೆಚ್.ಸಿಗಳಾದ ಜನಾರ್ಧನ, ಜಯರಾಮ, ಸುಂದರ, ರಾಧಾಕೃಷ್ಣ, ಪಿ.ಸಿಗಳಾದ ಮನೋಜ್, ಬಸವರಾಜ್, ಶಿವಕುಮಾರ್ ನಾಯ್ಕ ಪಾಲ್ಗೊಂಡಿರುತ್ತಾರೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave a Reply

Please enter your comment!
Please enter your name here