ಬಂಟ್ವಾಳ: ತುಂಬೆ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ ; ಸಂಚಾರ ಅಸ್ತವ್ಯಸ್ಥ

Spread the love

ಬಂಟ್ವಾಳ: ಗ್ಯಾಸ್ ತುಂಬಿದ ಟ್ಯಾಂಕರೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದ ಘಟನೆ ಬಂಟ್ವಾಳ ತಾಲೂಕಿ ತುಂಬೆ ಬಿ ಎ ಕಾಲೇಜಿನ ಬಳಿ ಭಾನವಾರ ಸಂಭವಿಸಿದೆ.

tanker-acident-thumbe-14-02-2020 tanker-acident-thumbe-14-02-2018 tanker-acident-thumbe-14-02-2016 tanker-acident-thumbe-14-02-2021

ಮಂಗಳೂರಿನಿಂದ ಬೆಂಗಳೂರಿಗೆ ಗ್ಯಾಸ್ ಕೊಂಡೊಯ್ಯುತ್ತಿದ್ದ ವೇಳೆ ಬಿ ಎ ಕಾಲೇಜಿನ ಬಳಿಯ ತಿರುವಿನಲ್ಲಿ ಭಾನುವಾರ ಸಂಜೆ ಸುಮಾರು 4 ಗಂಟೆಯ ವೇಳೆಗೆ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ರಸ್ತೆಗೆ ಪಲ್ಟಿಯಾಗಿ ಬಿದ್ದಿದೆ. ಟ್ಯಾಂಕರ್ ಪಲ್ಟಿಯಾದ ಜಾಗ ಜನನಿಬಿಡ ಪ್ರದೇಶವಾಗಿದ್ದು ಅನಿಲ ಸೋರಿಕೆಯಾಗದೆ ಇದ್ದುದರಿಂದ ಭಾರಿ ಅನಾಹುತವೊಂದು ತಪ್ಪಿದೆ. ಆದರೆ ಟ್ಯಾಂಕರಿನ ಡಿಸೇಲ್ ಸೋರಿಕೆಯಾಗಿ ರಸ್ತೆಯಲ್ಲಿ ಹರಿದು ಹೋದ ಪರಿಣಾಮ ಕೆಲಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಟ್ಯಾಂಕರ್ ಚಾಲಕ ಘಟನೆಯಲ್ಲಿ ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣೆ, ಗ್ರಾಮಾಂತರ ಠಾಣೆ ಪೋಲಿಸರು ಹಾಗೂ ಅಗ್ನಿಶಾಮಕ ದಳದ ಸಿಬಂದಿಗಳು ಆಗಮಿಸಿ ತುರ್ತು ಕ್ರಮವನ್ನು ಕೈಗೊಂಡರು.


Spread the love