ಬಂಟ್ವಾಳ ಯುವಕ ಮಸ್ಕತ್ ಅಪಘಾತದಲ್ಲಿ ದುರ್ಮರಣ 

Spread the love

ಬಂಟ್ವಾಳ:  ಒಮನ್ ದೇಶದ ಮಸ್ಕತ್ ನಲ್ಲಿ   ಉದ್ಯೋಗದಲ್ಲಿದ್ದ ಬಂಟ್ವಾಳದ ಯುವಕನೊಬ್ಬ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.

ತಾಲೂಕಿನ ಬಿಸಿ ರೋಡು ಸಮೀಪದ ಪರ್ಲಿಯ ನಿವಾಸಿ ದಿವಂಗತ ಅಬ್ದುಲ್ ಘನಿ ಎಂಬವರ ಪುತ್ರ , ಮುಹಮ್ಮದ್ ಮುಸ್ತಫಾ (28) ಮ್ರತ ಯುವಕ, ಮಸ್ಕತ್ ಆಸ್ಪತ್ರೆಯೊಂದರಲ್ಲಿ ಉದ್ಯೋಗಿಯಾಗಿದ್ದ ಮುಸ್ತಫಾ ಆರು ತಂಗಳ ಹಿಂದಯೆಷ್ಟೇ ಊರಿಗೆ ಬಂದು ಮತ್ತೆ ಉದ್ಯೋಗಕ್ಕೆ ತೆರಳಿದ್ದ.  ಗುರುವಾರ ಸಂಜೆ ಮಸ್ಕತ್ ನಲ್ಲಿ ಅಗತ್ಯ ಕಾರ್ಯ ನಿಮಿತ್ತ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿಯಲಾಗಿದೆ

ಈತನ ತಂದೆ ಅಬ್ದುಲ್ ಘನಿ ಮೂರು ತಿಂಗಳ ಹಿಂದೆಯಷ್ಟೇ ಮೃತ ಪಟ್ಟಿದ್ದು, ಇವರ  ಇಬ್ಬರೇ ಗಂಡು ಮಕ್ಕಳ ಪೈಕಿ ಹಿರಿಯ ಮಗ  ಅಬ್ದುಲ್ ಲತೀಫ್ ಅನಾರೋಗ್ಯದಿಂದ ಸುಮಾರು ಐದು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇದೀಗ ಮನೆಯಲ್ಲಿ ತಾಯಿ ಹಾಗೂ ಸಹೋದರಿ ಮಾತ್ರ  ಇದ್ದಾರೆ ಎಂದು ತಿಳಿದು ಬಂದಿದೆ.

ಮುಸ್ತಫಾ ದುರಂತ ಮರಣದ ಸುದ್ದಿ ತಿಳಿಯುತ್ತಲೇ ಗುರುವಾರ ರಾತ್ರಿ ಸ್ಥಳೀಯ ಯುವಕರ ದಂಡೇ ಆತನ ಪರ್ಲಿಯದಲ್ಲಿರುವ ಮನೆಯತ್ತ ಧಾವಿಸಿ ಮನೆ ಮಂದಿಗೆ ಸಾಂತ್ವನ ಹೇಳುತ್ತಿರುವ  ದ್ರಶ್ಯ ಕಂಡು ಬಂದಿದೆ. ಶವವನ್ನು ಊರಿಗೆ ತರುವ   ಅಥವಾ ಅಲ್ಲಿಯೇ ದಫನ ಮಾಡಿಸುವ ಬಗ್ಗೆ ಇನ್ನಷ್ಟೇ ನಿರ್ಧಾರಕ್ಕೆ ಬರಲಾಗುವುದು ಎಂದು ಸ್ಥಳೀಯರು ತಿಳಿಸಿದ್ದಾರೆ.


Spread the love