ಬಜಿಲಕೇರಿಯಲ್ಲಿ ಯುವಕರ ಮೇಲೆ ತಂಡದಿಂದ ದಾಳಿ

Spread the love

ಬಜಿಲಕೇರಿಯಲ್ಲಿ ಯುವಕರ ಮೇಲೆ ತಂಡದಿಂದ ದಾಳಿ

ಮಂಗಳೂರು : ಕಾರು ಮತ್ತು ಬೈಕಿನಲ್ಲಿ ಬಂದ ತಂಡವೊಂದು ಮೂವರು ಯುವಕರ ಮೇಲೆ ತಲವಾರಿನಿಂದ ದಾಳಿ ನಡೆಸಿದ ಘಟನೆ ಸೋಮವಾರ ರಾತ್ರಿ ನಗರದ ಬಜಿಲಕೇರಿ ಎಂಬಲ್ಲಿ ನಡೆದಿದೆ.

ದಾಳಿಯಿಂದ ಗಾಯಗೊಂಡ ಯುವಕರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈಯಕ್ತಿಕ ದ್ವೇಷದಿಂದ ಮಾರಕಾಯುಧದೊಂದಿಗೆ ಆಗಮಿಸಿದ ತಂಡ ದಾಳಿ ನಡೆಸಿದೆ ಎಂದು ದೂರಲಾಗಿದೆ

ಬಳಿಕ ಪರಿಸ್ಥಿತಿ ನಿಯಂತ್ರಿಸಿದ ಪೊಲೀಸರು ದುಷ್ಕರ್ಮಿಗಳನ್ನು ವಶಕ್ಕೆ ಪಡೆದಿದ್ದಾರೆ.


Spread the love