ಬಜೆಟಿನಲ್ಲಿ ಕರಾವಳಿಗೆ ಅನುದಾನ ನೀಡದ್ದು ಖಂಡನೀಯ; ಭರತ್ ಶೆಟ್ಟಿ

Spread the love

ಬಜೆಟಿನಲ್ಲಿ ಕರಾವಳಿಗೆ ಅನುದಾನ ನೀಡದ್ದು ಖಂಡನೀಯ; ಭರತ್ ಶೆಟ್ಟಿ

ಮಂಗಳೂರು: ಮೈತ್ರಿ ಸರ್ಕಾರದ ಬಜೆಟ್ ಕುರಿತು ಮಂಗಳೂರು ಉತ್ತರದ ಶಾಸಕ ಭರತ್ ಶೆಟ್ಟಿ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದು ಈ ಬಜೆಟ್ ನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಿಗೆ ಯಾವುದೇ ಅನುದಾನ ನೀಡದ್ದು ಖಂಡನೀಯ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಯವರು ಈ ಸಾಲಿನ ಬಜೆಟ್ ನಲ್ಲಿ ದಕ್ಷಿಣಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆ ಸೇರಿದಂತೆ ಯಾವುದೇ ಕರಾವಳಿ ಭಾಗದ ಕುರಿತು ಚಕಾರವೆತ್ತಲಿಲ್ಲ. ಕರಾವಳಿಯ ಪ್ರಮುಖ ವ್ಯವಹಾರವಾದ ಮೀನುಗಾರಿಕೆಗೂ ಕೂಡಾ ಅನುದಾನ ನೀಡಲಿಲ್ಲ. ಇನ್ನು ಮಂಗಳೂರಿನಲ್ಲಿ ನೆರೆ, ಮಳೆಯ ಹಾವಳಿಯಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿದ್ದು, ಈ ಕುರಿತು ಯಾವುದೇ ಪ್ಯಾಕೇಜ್ ಗಳನ್ನು ಬಿಡುಗಡೆ ಮಾಡಿಲ್ಲ.

ಕರ್ನಾಟಕ ರಾಜಧಾನಿ ಬೆಂಗಳೂರಿನ ಬಳಿಕ ಮುಂದುವರಿಯುತ್ತಿರುವ ನಗರವಾಗಿದೆ ಮಂಗಳೂರು. ಸ್ಮಾರ್ಟ್ ಸಿಟಿ ಯೋಜನೆಗೆ ಗುರುತು ಮಾಡಿಟ್ಟ ನಗರವಾಗಿದೆ. ಹೀಗಿದ್ದು ಕೂಡಾ ಮಂಗಳೂರಿಗೆ ಯಾವುದೇ ರೀತಿಯ ಅನುದಾನ ನೀಡದಿರುವುದು ಖಂಡನೀಯ ಎಂದು ಭರತ್ ಶೆಟ್ಟಿ ಹೇಳಿದ್ದಾರೆ.


Spread the love