ಬಜೆ ಅಣೆಕಟ್ಟಿನ ನೀರು ಕೇವಲ 7 ದಿನಕ್ಕೆ ಲಭ್ಯ ; 35 ವಾರ್ಡಿಗೆ 2 ವಿಭಾಗದಲ್ಲಿ ವಿಂಗಡಿಸಿ ಪೊರೈಕೆ

Spread the love

ಬಜೆ ಅಣೆಕಟ್ಟಿನ ನೀರು ಕೇವಲ 7 ದಿನಕ್ಕೆ ಲಭ್ಯ ; 35 ವಾರ್ಡಿಗೆ 2 ವಿಭಾಗದಲ್ಲಿ ವಿಂಗಡಿಸಿ ಪೊರೈಕೆ

ಉಡುಪಿ: ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಬಜೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಎಪ್ರಿಲ್ 29ರಂದು ಬರಿದಾಗಿದ್ದು, ಶೀರೂರು, ಮಾಣೈ ಮಠದ ಗುಂಡಿ, ಭಂಡಾರಿಬೆಟ್ಟು, ಪುತ್ತಿಗೆ ಮಠ, ಇತ್ಯಾಧಿ ಪ್ರದೇಶದಲ್ಲಿ ಅಲ್ಲಲ್ಲಿ ಸಂಗ್ರಹವಿರುವ ನೀರನ್ನು ಬೋಟ್ ಪಂಪುಗಳ ಮುಖಾಂತರ ಪಂಪಿಂಗ್ ಮಾಡಿ ಜಲಾಶಯಕ್ಕೆ ನೀರು ಹಾಯಿಸಿ ಶುದ್ಧೀಕರಣಗೊಳಿಸಿ ದಿನ ಬಿಟ್ಟು ದಿನ ಮೇ 23ರ ತನಕ ನೀಡಲಾಗುತ್ತಿತ್ತು. ಅಣೆಕಟ್ಟು ಪ್ರದೇಶದಲ್ಲಿ ಅಲ್ಲಲ್ಲಿ ಹೊಂಡದಲ್ಲಿರುವ ನೀರು ಉಡುಪಿ ನಗರಕ್ಕೆ ಕೇವಲ 7 ದಿನಗಳಿಗೆ ಮಾತ್ರ ಸಾಕಾಗುವುದರಿಂದ ಮಳೆ ಕೂಡಾ ಇಲ್ಲದುದರಿಂದ ಮಳೆಗಾಲ ಪ್ರಾರಂಭವಾಗುವ ತನಕ ಉಡುಪಿ ನಗರದ 35 ವಾರ್ಡ್‍ಗಳನ್ನು 2 ವಿಭಾಗಗಳನ್ನಾಗಿ ವಿಂಗಡಿಸಿ ಸಂಬಂಧಪಟ್ಟ ವಾರ್ಡ್ ಗಳಿಗೆ ನೀರು ಪೂರೈಸಲಾಗುವುದು.

ಮೇ 24, ಮೇ 28, ಜೂನ್ 01 ಹಾಗೂ ಜೂನ್ 05 ರಂದು ಕೊಳ, ವಡಭಾಂಡೇಶ್ವರ, ಮಲ್ಪೆ ಸೆಂಟ್ರಲ್, ಕೊಡವೂರು, ಕಲ್ಮಾಡಿ, ಕಸ್ತೂರ್ಬಾನಗರ, ಸಗ್ರಿ, ಮೂಡುಪೆರಂಪಳ್ಳಿ, ಇಂದಿರಾನಗರ, ಚಿಟ್ಪಾಡಿ, ಬಡಗುಬೆಟ್ಟು, ಇಂದ್ರಾಳಿ, ಶಿರಿಬೀಡು, ಬನ್ನಂಜೆ, ಅಂಬಲಪಾಡಿ, ಅಜ್ಜರಕಾಡು, ಕಿನ್ನಿಮುಲ್ಕಿ, ಬೈಲೂರು, ಒಳಕಾಡು, ತೆಂಕಪೇಟೆ, ಕುಂಜಿಬೆಟ್ಟು. ವಾರ್ಡುಗಳಿಗೆ ಹಾಗೂ ಮೇ 27, ಮೇ 31, ಜೂನ್ 4 ಹಾಗೂ ಜೂನ್ 8 ರಂದು ಸರಳೆಬೆಟ್ಟು, ಈಶ್ವರನಗರ, ಮಣಿಪಾಲ, ಕಕ್ಕುಂಜೆ, ಕರಂಬಳ್ಳಿ, ಮೂಡುಬೆಟ್ಟು, ಕೊಡಂಕೂರು, ನಿಟ್ಟೂರು, ಸುಬ್ರಹ್ಮಣ್ಯ ನಗರ, ಗೋಪಾಲಪುರ, ಕಡಿಯಾಳಿ, ಗುಂಡಿಬೈಲು, ಸೆಟ್ಟಿಬೆಟ್ಟು, ಪರ್ಕಳ. ವಾರ್ಡುಗಳಿಗೆ ನೀರು ಪೂರೈಕೆಯಾಗಲಿದೆ.

ಮಳೆಗಾಲ ಪ್ರಾರಂಭವಾದರೆ ಕುಡಿಯುವ ನೀರನ್ನು ಹಿಂದಿನಂತೆ ಪ್ರತಿದಿನ ಪೂರೈಸಲಾಗುವುದು. ಕುಡಿಯುವ ನೀರು ಪೂರೈಸಲು ನಿಗಧಿಪಡಿಸಿದ ದಿನದಂದು ಸಂಬಂಧಪಟ್ಟ ವಾರ್ಡಿನಲ್ಲಿ ನೀರು ಬಾರದ ಪ್ರದೇಶದಲ್ಲಿ ಅಂದು ಮಾತ್ರ ಆ ಭಾಗದಲ್ಲಿ ಟ್ಯಾಂಕರ್ ನೀರನ್ನು ಪೂರೈಸಲಾಗುವುದು. ಕುಡಿಯುವ ನೀರಿಗಾಗಿ ಬಹುಮಹಡಿ ಕಟ್ಟಡಗಳನ್ನು ಹೊರತುಪಡಿಸಿ ಗೃಹಬಳಕೆಯವರು ಮಾತ್ರ ದೂರವಾಣಿ ಸಂಖ್ಯೆ 8496989248, 8496989166, 8496989184, 8496989122ನ್ನು ಅಥವಾ ಸಹಾಯಕ ಕಾರ್ಯಪಾಲಕ ಅಭಿಯಂತರರು, ಗಣೇಶ್ -8496989759, ಪರಿಸರ ಅಭಿಯಂತರರು ಬಿ. ರಾಘವೇಂದ್ರ – 9448507244 ಇವರನ್ನು ಸಂಪರ್ಕಿಸಬಹುದು.

ಬಜೆ ಜಲಾಶಯದಲ್ಲಿ ನೀರಿನ ಸಂಗ್ರಹ ಬರಿದಾಗಿರುವುದರಿಂದ ನಾಗರಿಕರು ದಯವಿಟ್ಟು ನೀರನ್ನು ಮಿತವಾಗಿ ಬಳಸಿ ನಗರಸಭೆಯೊಂದಿಗೆ ಸಹಕರಿಸಬೇಕಾಗಿ ನಗರಸಭಾ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ ಹಾಗೂ ಪೌರಾಯುಕ್ತ ಡಿ. ಮಂಜುನಾಥಯ್ಯ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love