ಬಶೀರ್ ಮನೆಗೆ ಭೇಟಿ ನೀಡಿದ ಸಿದ್ದರಾಮಯ್ಯ; ಕುಟುಂಬಿಕರಿಗೆ ಸಾಂತ್ವನ

Spread the love

ಬಶೀರ್ ಮನೆಗೆ ಭೇಟಿ ನೀಡಿದ ಸಿದ್ದರಾಮಯ್ಯ; ಕುಟುಂಬಿಕರಿಗೆ ಸಾಂತ್ವನ

ಮಂಗಳೂರು: ಜನವರಿ 3 ರಂದು ಕಾಟಿಪಳ್ಳದಲ್ಲಿ ದೀಪಕ್ ರಾವ್ ಅವರ ಕೊಲೆಗೆ ಪ್ರತಿಕಾರವಾಗಿ ದುಷ್ಕರ್ಮಿಗಳಿಂದ ಗಂಭೀರವಾಗಿ ಹಲ್ಲೆಗೊಳಗಾಗಿ ಭಾನುವಾರ ಬೆಳಗ್ಗೆ ಮೃತಪಟ್ಟ ಬಶೀರ್ ಅವರ ಮಂಗಳೂರಿನ ಆಕಾಶಭವನದಲ್ಲಿರುವ ಮನೆಗೆ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದರು.

ಬಶೀರ್ ಅವರ ಮನೆಯವರಿಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿಗಳು, ಕೊಲೆ ಪ್ರಕರಣವನ್ನು ಗಂಭಿರವಾಗಿ ತನಿಖೆ ನಡೆಸುವಂತೆ ಪೋಲಿಸ್ ಅಧಿಕಾರಿಗಳಿಗೆ ಖಡಕ್ ಆದೇಶ ನೀಡಿದರು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಸಚಿವರಾದ ಯು ಟಿ ಖಾದರ್, ಸುರತ್ಕಲ್ ಶಾಸಕ ಮೊಯ್ದಿನ್ ಬಾವ, ಮಂಗಳೂರು ಮೇಯರ್ ಕವಿತಾ ಸನೀಲ್, ನಗರ ಪೋಲಿಸ್ ಆಯುಕ್ತ ಟಿ ಆರ್ ಸುರೇಶ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love