ಬಹುಮಹಡಿ ಕಟ್ಟಡದಿಂದ ಕೆಳಗೆ ಬಿದ್ದು ಹೆಣ್ಣು ಮಗು ಸಾವು

Spread the love

ಬಹುಮಹಡಿ ಕಟ್ಟಡದಿಂದ ಕೆಳಗೆ ಬಿದ್ದು ಹೆಣ್ಣು ಮಗು ಸಾವು

ಮಂಗಳೂರು: ಬಹುಮಹಡಿ ಕಟ್ಟಡದ 8 ನೇ ಮಹಡಿಯಿಂದ ಕೆಳಗೆ ಬಿದ್ದು ಹೆಣ್ಣು ಮಗುವೊಂದು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ಬುಧವಾರ ಸಂಭವಿಸಿದೆ.

ಮೃತ ಬಾಲೆಯನ್ನು ಶಕ್ತಿನಗರದ ನಿವಾಸಿ ವಿಲ್ಸನ್ ಸೆಬಾಸ್ಟಿಯನ್ ಡಿಸೋಜಾರ ಮಗಳು ಶಾನೆಲ್ ಜೆನಿಶೀಯಾ(6) ಎಂದು ಗುರುತಿಸಲಾಗಿದೆ.

ವಿಲ್ಸನ್ ಅವರು ಶಾರ್ಜಾದಲ್ಲಿ ಕೆಲಸ ಮಾಡಿಕೊಂಡಿದ್ದು, ಅವರ ಪತ್ನಿ ಅಲಿಶಾ ಡಿಸೋಜಾ ಹಾಗೂ ಮಗಳು ಶಾನೆಲ್ ಮಂಗಳೂರು ಶಕ್ತಿನಗರದಲ್ಲಿ ಕೆಸಿ ನಾಯಕ್ ಅವರ ಮ್ಹಾಲಕತ್ವದ ಮಹಾಬಲೇಶ್ವರ ಬಿಲ್ಡರ್ಸ್ ನವರ ಕ್ಲಾಸಿಕ್ ಸಫಾಯರ್ ಅಪಾರ್ಟ್ ಮೆಂಟಿನ 8 ನೇ ಮಹಡಿಯ 805 ನೇ ಕೊಠಡಿಯಲ್ಲಿ ವೀಣಾ ಎಲಿಸಾ ಸಲ್ಡಾನಾ ರವರಿಂದ ಬಾಡಿಗೆ ಪಡೆದುಕೊಂಡು ವಾಸ್ತವ್ಯ ಮಾಡಿಕೊಂಡಿದ್ದು, ಬುಧವಾರ ಬೆಳಿಗ್ಗೆ 8.45 ಕ್ಕೆ ಶಾನೆಲ್ ಫ್ಲಾಟಿನ ಬೆಡ್ ರೂಮಿಗೆ ತಾಗಿ ಇರುವ ವೆರಾಡಾಂಡದ ಗ್ರಿಲ್ಸ್ ಮೇಲೆ ಹತ್ತಿ ಸ್ಲೈಡರ್ ಕಿಟಿಕಿಯ ಮೂಲಕ ಹೊರಗೆ ಇಣುಕುವ ವೇಳೆ ಆಯತಪ್ಪಿ 8ನೇ ಮಹಡಿಯಿಂದ 2 ನೇ ಅಂತಸ್ತಿನಲ್ಲಿರುವ ಖಾಲಿ ವರಾಂಡದ ಮೇಲೆ ಬಿದ್ದ ಪರಿಣಾಮ ತಲೆಗೆ ಗಂಭಿರ ಗಾಯವಾಗಿದ್ದು, ಕೂಡಲೇ ಕೆಎಮ್ ಸಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾಳೆ.

ಈ ಕುರಿತು ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love