ಬಾಲಿವುಡ್ ನಟ ಸುನೀಲ್ ಶೆಟ್ಟಿ ಪಿತೃ ವೀರಪ್ಪ ಶೆಟ್ಟಿ ನಿಧನ

Spread the love

ಬಾಲಿವುಡ್ ನಟ ಸುನೀಲ್ ಶೆಟ್ಟಿ ಪಿತೃ ವೀರಪ್ಪ ಶೆಟ್ಟಿ ನಿಧನ

ಮುಂಬಯಿ: ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪಿತೃ, ನಗರದ ಹೆಸರಾಂತ ಹಿರಿಯ ಉದ್ಯಮಿ, ಗ್ರ್ಯಾಂಟ್‍ರೋಡ್ ಅಲ್ಲಿನ ಹೊಟೇಲ್ ರಾಮಂಜನೇಯ ಹಾಗೂ ವರ್ಲಿ ಅಲ್ಲಿನ ಹೊಟೇಲ್ ಬ್ರಾಡ್‍ವೇ ಇದರ ಮಾಲೀಕ ವೀರಪ್ಪ ಶೆಟ್ಟಿ (93.) ಇವರು ಬುಧವಾರ ಮುಂಜಾನೆ ದೀರ್ಘಾವಧಿಯ ಅನಾರೋಗ್ಯದಿಂದ ಬ್ರೀಜ್‍ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದರು.

ಪ್ರಥಿü್ವ ಅಪಾರ್ಟ್‍ಮೆಂಟ್, ಅಲ್ಟಮೊಂಟೋ ರಸ್ತೆ, ಕೀಮ್ಸ್ ಕಾರ್ನಾರ್ ಮುಂಬಯಿ ನಿವಾಸದಲ್ಲಿ ವಾಸವಾಗಿದ್ದ ಮೃತರು 2013ನಿಂದ ಪಾಶ್ರ್ಚಪೀಡಿತರಾಗಿದ್ದರು. ಪಿತಾರನ್ನು ಸುನೀಲ್ ಶೆಟ್ಟಿ ಮನೆಯಲ್ಲೇ ಐಸಿಯು ರಚಿಸಿ ಆರೈಕೆ ಮಾಡುತ್ತಿದ್ದರು. ಮೃತರು ಪತ್ನಿ, ಸುಪುತ್ರ ಸುನೀಲ್ ಶೆಟ್ಟಿ, ಸುಪುತ್ರಿ ಸುಜಾತ ಶೆಟ್ಟಿ ಅವರನ್ನು ಅಗಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಶಿಮಂತೂರು ನಿವಾಸಿ ಆಗಿದ್ದ ವೀರಪ್ಪ ಶೆಟ್ಟಿ ಇವರು ಕಿನ್ನಿಗೋಳಿ ತಾಳಿಪಾಡಿಗುತ್ತು ತೌಡ ಶೆಟ್ಟಿ ಮತ್ತು ಜಲಕಹಿತ್ಲು ನೊಕ್ಕು ಶೆಡ್ತಿ ದಂಪತಿ ಸುಪುತ್ರರಾಗಿದ್ದು ಮುಂಬಯಿಯಲ್ಲಿ ಅನೇಕ ದಶಕಗಳಿಂದ ನೆಲೆಯಾಗಿ ಓರ್ವ ಹಿರಿಯ ಹೊಟೇಲು ಉದ್ಯಮಿ ಆಗಿ ಜನಾನುರೆಣಿಸಿದ್ದರು. ನನ್ನ ತಂದೆಯೇ ನನ್ನ ರೋಲ್‍ಮೋಡೆಲ್ ಆಗಿದ್ದು ಅವರ ಅನಾರೋಗ್ಯದ ಬಳಿಕ ತಾನು ಯಾವುದೇ ಚಲನಚಿತ್ರಕ್ಕೆ ಸಹಿಹಾಕಿಲ್ಲದ್ದನ್ನು ಸುನೀಲ್ ಶೆಟ್ಟಿ ನೆನಪಿಸಿದ್ದಾರೆ.

ಮಾ.02ನೇ ಗುರುವಾರ ಬೆಳಿಗ್ಗೆ 11.00 ಗಂಟೆಗೆ ವರೇಗೆ ಮೃತರ ಪಾರ್ಥೀವಶರೀರ ಸ್ವನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಿ ನಂತರ ವರ್ಲಿ ಅಲ್ಲಿನ ರುದ್ರಭೂಮಿಯಲ್ಲಿ 12.00 ಗಂಟೆಗೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.


Spread the love