ಬಿಜೆಪಿಯಿಂದ ಆಹ್ವಾನ ಬಂದರೆ ಮರಳಿ ಪಕ್ಷಕ್ಕೆ ಸೇರುವೆ : ರಘುಪತಿ ಭಟ್

Spread the love

ಬಿಜೆಪಿಯಿಂದ ಆಹ್ವಾನ ಬಂದರೆ ಮರಳಿ ಪಕ್ಷಕ್ಕೆ ಸೇರುವೆ : ರಘುಪತಿ ಭಟ್

ಹುಬ್ಬಳ್ಳಿ : ‘ಭಾರತೀಯ ಜನತಾ ಪಕ್ಷಕ್ಕೆ ಮರಳಿ ಸೇರ್ಪಡೆಗೆ ಆಹ್ವಾನ ನೀಡಿದರೆ ನಾನು ಸೇರ್ಪಡೆಗೆ ಸಿದ್ಧನಿದ್ದೇನೆ’ ಎಂದು ಮಾಜಿ ಶಾಸಕ ರಘುಪತಿ ಭಟ್ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನರನ್ನ ಮರಳಿ ಬಿಜೆಪಿಗೆ ಸೇರ್ಪಡೆಗೆ ಚಿಂತನೆ ನಡೆದಿದ್ದು, ನನ್ನನ್ನು ಕರೆದರೂ ಹೋಗುವೆ. ನನಗೆ ಆ ಪಕ್ಷದೊಂದಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.

ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಆಗಿದ್ದೇನೆ. ಚುನಾವಣೆಯಲ್ಲಿ ಸೋಲಿಲಿ, ಬಿಡಲಿ. ಬಿಜೆಪಿ ಕಾರ್ಯಕರ್ತನಾಗಿ ಇರುವೆ ಎಂದು ಆವಾಗಲೇ ಹೇಳಿದ್ದೆ. ಈಗಲೂ ಹಾಗೇ ಇದ್ದೇನೆ ಎಂದು ಅವರು ತಿಳಿಸಿದರು.

ನಾನು ರಾಷ್ಟ್ರೀಯ ವಿಚಾರ ಇರಿಸಿಕೊಂಡು ರಾಜಕಾರಣ ಮಾಡಿದವನು. ನನಗೆ ಪಕ್ಷದಿಂದ ಉಚ್ಚಾಟನೆ ಆಗಿದ್ದು, ಮರಳಿ ಕರೆದರೆ ಖಂಡಿತವಾಗಿಯೂ ಹೋಗುವೆ. ಇದೀಗ ನಾನು ರಾಜಕಾರಣಕ್ಕೆ ಸ್ವಲ್ಪ ವಿರಾಮ ಹೇಳಿ ಧಾರ್ಮಿಕ ಕಾರ್ಯಕ್ರಮ ಮಾಡಿಕೊಂಡು ಇದ್ದೇನೆ. ಹೆಚ್ಚು ನೆಮ್ಮದಿಯಲ್ಲಿ ಇದ್ದೇನೆ ಎಂದು ಹೇಳಿದರು.


Spread the love
Subscribe
Notify of

0 Comments
Inline Feedbacks
View all comments