ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷರಾಗಿ ಕುಯಿಲಾಡಿ ಸುರೇಶ್ ನಾಯಕ್ ಆಯ್ಕೆ

Spread the love

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷರಾಗಿ ಕುಯಿಲಾಡಿ ಸುರೇಶ್ ನಾಯಕ್ ಆಯ್ಕೆ

ಉಡುಪಿ: ರಾಜ್ಯಾದ್ಯಂತ  ಬಿಜೆಪಿ ಸಂಘಟನಾತ್ಮಕ ಜಿಲ್ಲೆಗಳ – ಜಿಲ್ಲಾಧ್ಯಕ್ಷರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ನೂತನ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು ಉಡುಪಿ ಜಿಲ್ಲಾಧ್ಯಕ್ಷರಾಗಿ ಕುಯಿಲಾಡಿ ಸುರೇಶ್ ನಾಯಕ್ ಆಯ್ಕೆಯಾಗಿದ್ದಾರೆ.

ರಾಜ್ಯಾದ್ಯಂತ ಬಿಜೆಪಿ ಪದಾಧಿಕಾರಿಗಳ ಮೂರು ವರ್ಷಗಳ (2016-2019) ಅವಧಿಯು ಪೂರ್ಣಗೊಂಡ ಹಿನ್ನೆಲೆಯಲ್ಲಿ, 2019ರ ಅಂತ್ಯದಲ್ಲಿ ಸಂಘಟನೆಯ ಪುನಾರಚನೆಯ ಪ್ರಕ್ರಿಯೆ ಆರಂಭವಾಗಿತ್ತು. ಮೊಬೈಲ್ ಮಿಸ್ಡ್ ಕಾಲ್ ಮೂಲಕ ಈ ಬಾರಿಯೂ ಹೆಚ್ಚುವರಿಯಾಗಿ ಸದಸ್ಯರನ್ನು ಸೇರಿಸಿಕೊಂಡ ಬಿಜೆಪಿ ಪಾಳಯದಲ್ಲಿ, ಪ್ರತಿ ಮೂರು ವರ್ಷಕ್ಕೊಮ್ಮೆ ಕಾರ್ಯಕರ್ತರಿಗೆ ಹೊಸದಾಗಿ ಅಧಿಕಾರ ನೀಡುವ ಪದ್ಧತಿಯಿದೆ.

ಅಂತೆಯೇ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಹಾಗೂ ರಾಷ್ಟ್ರೀಯ ಅಧ್ಯಕ್ಷರಾಗಿ ಇತ್ತೀಚೆಗೆ ಜೆ ಪಿ ನಡ್ಡಾ ಆಯ್ಕೆಯಾಗಿದ್ದರು. ಜೊತೆ-ಜೊತೆಗೆ  ಬಿಜೆಪಿ ಸಂಘಟನಾತ್ಮಕ ಜಿಲ್ಲೆಗಳ ಜಿಲ್ಲಾಧ್ಯಕ್ಷರ ಆಯ್ಕೆ ಕಾರ್ಯ ಕೂಡ ಆರಂಭವಾಗಿದ್ದು ಈಗಾಗಲೇ 18 ಜಿಲ್ಲೆಗಳ ಅಧ್ಯಕ್ಷರುಗಳ ಆಯ್ಕೆ ಆಗಿತ್ತು.

ಉಡುಪಿ ಸೇರಿದಂತೆ ಬಾಕಿ ಉಳಿದ ಜಿಲ್ಲೆಗಳಿಗೆ ಇಂದು ಆಯ್ಕೆ ಪ್ರಕ್ರಿಯೆ ನಡೆದಿದ್ದು, ಜಿಲ್ಲೆಯ, ಸುರೇಶ್ ನಾಯಕ್ ಅವರು ಜಿಲ್ಲಾಧ್ಯಕ್ಷರಾಗಿ ಮೂರು ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ. ಜಿಲ್ಲೆ ಹಾಗೂ ರಾಜ್ಯ ಸಮಿತಿಗಳ ಪದಾಧಿಕಾರಿಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಬಳಿಕ ಇಂದು ನೂತನ ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡಲಾಗಿದೆ.


Spread the love