ಬಿಪಿಎಲ್‌ ಕುಟುಂಬಗಳಿಗೆ ಮುಖ್ಯ ಮಂತ್ರಿಗಳ ಅನಿಲ ಭಾಗ್ಯ: ಸಚಿವ ಯು.ಟಿ. ಖಾದರ್‌

Spread the love

ಬಿಪಿಎಲ್‌ ಕುಟುಂಬಗಳಿಗೆ  ಮುಖ್ಯ ಮಂತ್ರಿಗಳ ಅನಿಲ ಭಾಗ್ಯ: ಸಚಿವ ಯು.ಟಿ. ಖಾದರ್‌

ಮಂಗಳೂರು: ರಾಜ್ಯ ಸರ್ಕಾರದ ವತಿ ಯಿಂದ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕ ನೀಡುವ ‘ಮುಖ್ಯ ಮಂತ್ರಿಗಳ ಅನಿಲ ಭಾಗ್ಯ’ ಯೋಜ ನೆಯನ್ನು ಆಗಸ್ಟ್‌ 15ರೊಳಗೆ ಉತ್ತರ ಕರ್ನಾಟಕದ ಜಿಲ್ಲೆಯೊಂದರಲ್ಲಿ ಉದ್ಘಾ ಟಿಸುವರು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಹೇಳಿದರು.

ಅವರು ಗುರುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡುತ್ತ, ‘ಈ ಯೋಜನೆ ಗಾಗಿ ಸರ್ಕಾರ 300 ಕೋಟಿ ಎತ್ತಿಟ್ಟಿದ್ದು, ರಾಜ್ಯದಲ್ಲಿ ಸುಮಾರು 35.44 ಲಕ್ಷ ಫಲಾ ನುಭವಿಗಳನ್ನು ಗುರುತಿಸಲಾಗಿದೆ. ಇನ್ನೂ ಹೆಚ್ಚುವರಿ ಮೊತ್ತ ಅಗತ್ಯವಿದ್ದರೆ ನೀಡು ವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

ಅಂತ್ಯೋದಯ ಅಥವಾ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಪಡಿತರ ಚೀಟಿ ಹೊಂದಿದವರಿಗೆ ಉಚಿತ ಅನಿಲ ಸಂಪರ್ಕ ನೀಡುವುದು ಸರ್ಕಾ ರದ ಉದ್ದೇಶ. ಎರಡು ಬರ್ನರ್‌ಗಳ ಸ್ಟೌ ಮತ್ತು ಅನಿಲ ಸಂಪರ್ಕವನ್ನು ಸರ್ಕಾರದ ವತಿಯಿಂದ ನೀಡಲಾಗುವುದು. ನೋಂದಣಿಗೆ ₹ 20ರ ಹೊರತಾಗಿ ಅರ್ಜಿದಾರರು ಬೇರೆ ಯಾವುದೇ ಹಣ ನೀಡಬೇಕಾಗಿಲ್ಲ. ಕುಟುಂಬದ ಮಹಿ ಳೆಯ ಹೆಸರಿಗೇ ಈ ಸಂಪರ್ಕ ನೀಡಲಾ ಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ 71 ಸಾವಿರ ಜನರಿಗೆ ಅನಿಲ ಸಂಪರ್ಕ ಇಲ್ಲ. ಅರ್ಜಿ ಸಲ್ಲಿಸಿದ 7 ದಿನಗಳೊಳಗೆ ಸಂಪರ್ಕ ನೀಡಲಾಗು ವುದು. ಒಂದು ವೇಳೆ ಕೇಂದ್ರ ಸರ್ಕಾರದ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಿದ್ದು, ಸಂಪರ್ಕ ಪಡೆಯದೇ ಇದ್ದಲ್ಲಿ, ಅನಿಲ ಭಾಗ್ಯಕ್ಕಾಗಿ ನಾಗರಿಕರು ಅರ್ಜಿ ಸಲ್ಲಿಸುವ ಅವಕಾಶವಿದೆ ಎಂದು ವಿವರಿಸಿದರು.

ಹತ್ತಿರದ ಪ್ರಾಂಚೈಸಿ ಅಥವಾ ಗ್ರಾಮ ಪಂಚಾಯಿತಿ ಕಚೇರಿ, ಜನಸ್ನೇಹಿ ಕೇಂದ್ರ ವನ್ನು ಸಂಪರ್ಕಿಸಿ ನಾಗರಿಕರು ಅರ್ಜಿ ಸಲ್ಲಿಸಬಹುದು ಎಂದು ಅವರು ವಿವರಿಸಿದರು.

 


Spread the love