ಬಿಲ್ಲಿನ ವಿಚಾರವಾಗಿ ಬಾರಿನಲ್ಲಿ ಕುಡಿದು ದಾಂಧಲೆ; ದೂರು ದಾಖಲು
ಉಡುಪಿ: ಬಾರಿನಲ್ಲಿ ಬಿಲ್ಲಿನ ವಿಚಾರವಾಗಿ ಕುಡಿದು ದಾಂಧಲೆ ಮಾಡಿ ಹಲ್ಲೆ ನಡೆಸಿದ ಘಟನೆ ಉಡುಪಿಯಲ್ಲಿ ಮಂಗಳವಾರ ರಾತ್ರಿ ನಡೆದಿದ್ದು ಎರಡು ಕಡೆಯಿಂದಲೂ ಕೂಡ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಪಂಚರತ್ನ ಬಾರಿನ ಮ್ಹಾಲಕರ ದೂರಿನ ಪ್ರಕಾರ ಮಂಳವಾರ ರಾತ್ರಿ ಕಿರಣ್ ಹಾಗೂ ಇತರ ಇಬ್ಬರೂ ಬಾರ್‌ಗೆ ಬಂದು ಮದ್ಯಪಾನ ಸೇವಿಸಿ ರಾತ್ರಿ ಸುಮಾರು ೦8:45 ಗಂಟೆಗೆ ಬಿಲ್ಲಿನ ವಿಷಯದಲ್ಲಿ ಸಪ್ಲಾಯರ್ ಹತ್ತಿರ ಹಣ ನೀಡುವುದಿಲ್ಲವಾಗಿ ಗಲಾಟೆ ಮಾಡಿದ್ದು ಅವರನ್ನು ಅವಾಚ್ಯ ಶಬ್ದದಿಂದ ಬೈದು ನಿಂದಿಸಿ, ಹೊಡೆದು ನಂತರ ಬಿಲ್ಲು ಕೊಡುವುದಿಲ್ಲವೆಂದು ಹೇಳಿ ಸಂತೋಷ್ ಶೆಟ್ಟಿ ರವರ ಆಫೀಸಿಗೆ ಬಂದು ಬೊಬ್ಬೆ ಹೊಡೆದು ಹೋಗಿ ನಂತರ ವಾಪಾಸು 11:45 ಗಂಟೆಗೆ ತಲವಾರು ಹಿಡಿದು ಕೊಂಡು ಕೊಲ್ಲುವ ಉದ್ದೇಶದಿಂದ ಕಡಿಯಲು ಬಂದಾಗ ಮ್ಯಾನೇಜರ್ ವಾಚ್‌ಮೆನ್‌ರವರು ಮತ್ತು ಹೋಟೆಲ್ ನ ಕೆಲಸಗಾರರು ಕಿರಣ್ ನನ್ನು ತಡೆದಿರುತ್ತಾರೆ. ಸಂತೋಷ್ ಶೆಟ್ಟಿ ರವರು ಹೃದಯ ಸಂಬಂದಿ ಖಾಯಿಲೆ ಇದ್ದುದ್ದರಿಂದ ಈ ಘಟನೆಯಿಂದ ಅಘಾತಗೊಂಡು ಚಿಕಿತ್ಸೆಯ ಬಗ್ಗೆ ಅದರ್ಶ ಅಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ, ಘಟನೆಯ ಸಮಯದಲ್ಲಿ ಕಿರಣ್ ಮತ್ತು ಅತನ ಜೊತೆ ಇದ್ದ ಇಬ್ಬರು ಹೋಟೆಲಿನ ಕೆಲಸಗಾರ ಮಂಜುನಾಥ ಎಂಬವರನ್ನು ದೂಡಿದ್ದರಿಂದ ಮಂಜುನಾಥರವರಿಗೆ ಎದೆಗೆ ಹಾಗೂ ಹೊಟ್ಟೆಗೆ ನೋವುಂಟಾಗಿರುತ್ತದೆ. ಅವರು ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ಅಲ್ಲದೆ, ಅರೋಪಿತರು ಹೋಟೆಲಿನ ಬಾಗಿಲಿನ ಗಾಜನ್ನು ಪುಡಿ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಇದಕ್ಕೆ ಪ್ರತಿಯಾಗಿ ಕಿರಣ್ ಕುಮಾರ್ ಅವರು ತನ್ನ ಸ್ನೇಹಿತ ಅನ್ವರ್ ನೊಂದಿಗೆ ಮಂಗಳವಾರ ರಾತ್ರಿ 10:30 ಗಂಟೆಗೆ ಪಂಚರತ್ನ ಬಾರ್ ನಲ್ಲ್ಲಿ ಕುಡಿದು ಹೊರಗೆ ಬರುವಾಗ ಬಾರಿನ ಮಾಲಕರಾದ ಸಂತೋಷ್ ಮತ್ತು ಸುಜೀತ್ ಮತ್ತು ಅವರ ಸಿಬ್ಬಂದಿಗಳು ರಾಡ್ ಮತ್ತು ಮರದ ತುಂಡಿನಿಂದ ಹಾಗೂ ಅಡುಗೆ ಕೋಣೆಯಲ್ಲಿದ್ದ ತಂದ ಚೂರಿಯಿಂದ ಇರಿದು ಕೊಲೆ ಮಾಡಲು ಪ್ರಯತ್ನಪಟ್ಟಿದ್ದು ಅಲ್ಲದೆ ಕಿರಣ್ ಕುಮಾರ್ ರವರಲ್ಲಿದ್ದ ಬಂಗಾರದ ಚೈನು, ಉಂಗುರ, ಮೊಬೈಲ್ ಜೆ ಎಸ್ ಪ್ರೈಮ್ ಕಸಿದುಕೊಂಡಿದ್ದು ಅಲ್ಲದೆ ಕಿರಣ್ ಕುಮಾರ್ ರವರ ಗೆಳೆಯನಾದ ಅನ್ಸರ್ನಿಗೆ ರಾಡ್‌ನೊಂದ ಹೊಡೆದು ಮರಾಣಾಂತಿಕ ಹಲ್ಲೆ ಮಾಡಿದ್ದು ಅಲ್ಲದೆ ಅವನ ಬಳಿ ಇದ್ದ ನಗದು 20000/- ರೂಪಾಯಿ, ಐ ಫೊನ್ 7 ಕಿತ್ತುಕೊಂಡಿದ್ದಾರೆ ಎಂದು ದೂರಿದ್ದಾರೆ.
ಎರಡು ಕಡೆಯವರ ದೂರನ್ನು ದಾಖಲಿಸಿರುವ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.
 
            
