ಬಿಷಪ್ ಪಟ್ಟಾಭಿಷೇಕ ಪೊಲೀಸ್ ಇಲಾಖೆಯ ಸಭೆ

Spread the love

ಬಿಷಪ್ ಪಟ್ಟಾಭಿಷೇಕ ಪೊಲೀಸ್ ಇಲಾಖೆಯ ಸಭೆ

ಸೆಪ್ಟೆಂಬರ್ 15 ರಂದು ನಡೆಯುವ ನೂತನ ಬಿಷಪ್ ದೀಕ್ಷೆ ಹಾಗೂ ಪಟ್ಟಾಭಿಷೇಕ ಕಾರ್ಯಕ್ರಮ ಪ್ರಯುಕ್ತ ರೊಜಾರಿಯೋ ಸಭಾಂಗಣದಲ್ಲಿ ಪೂರ್ವ ಭಾವಿ ತಯಾರಿಕೆಯಾಗಿ ಪೊಲೀಸ್ ಸಹಾಯಕ ಕಮಿಷನರ್ ರಾಮ್ ರಾವ್ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿದರು.

ಪ್ಟೆಂಬರ್ 15 ರಂದು ನಡೆಯುವ ಕಾರ್ಯಕ್ರಮದ ಸ್ಥಳ ಪರಿಶೀಲನೆ, ಗಣ್ಯ ಅತಿಥಿಗಳ ಆಗಮನದ ಬಗ್ಗೆ ಕಾರ್ಯಕ್ರಮದ ವೇಳಾ ಪಟ್ಟಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದರು. ಆ ದಿನದ ಪೊಲೀಸ್ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗದಲ್ಲಿ ವಾಹನಗಳಿಗೆ ರಸ್ತೆ ಮಾರ್ಪಾಡು, ವಾಹನಗಳ ಪಾರ್ಕಿಂಗ್ ಸ್ಥಳದ ಬಗ್ಗೆ ಚರ್ಚೆಯನ್ನು ನಡೆಸಲಾಯಿತು.

ವೃತ್ತ ನಿರೀಕ್ಷಕರಾದ ಎಸ್. ಎಂ. ರಾಣೆ ಹಾಗೂ ಪೊಲೀಸ್ ಕಾನ್‍ಸ್ಟೇಬಲ್‍ಗಳಾದಶ್ರೀ ಸತ್ಯ ಕಿರಣ್ ಮತ್ತು ಶ್ರೀ ಸುನೀಲ್ ಕುಮಾರ್, ಕಾರ್ಯಕ್ರಮದ ಮುಖ್ಯ ಸಂಯೊಜಕರಾದ ವ| ಜೆ.ಬಿ. ಕ್ರಾಸ್ತ ವಿವಿಧ ಸಮಿತಿಗಳ ಪ್ರಮುಖರಾದ ವ| ವಿನ್ಸೆಂಟ್ ಮೊಂತೇರೊ, ವ| ಜೊಕಿಂ ಫೆರ್ನಾಂಡಿಸ್ ವ| ವಿಜಯ್ ವಿಕ್ಟರ್ ಲೋಬೊ, ವ| ರೂಪೇಶ್ ಮಾಡ್ತಾ, ಸುಶೀಲ್ ನೊರೊನ್ಹಾ, ಲುವಿ ಪಿಂಟೊ, ರೊಯ್ ಕ್ಯಾಸ್ತಲಿನೊ, ಮಾರ್ಸೆಲ್ ಮೊಂತೆರೋ, ರೊಲ್ಫಿ ಡಿಕೊಸ್ತ, ಉಪಸ್ಥಿತರಿದ್ದರು.


Spread the love