ಬೀಡಿನಗುಡ್ಡೆಯಲ್ಲಿ ಆ್ಯಕ್ಟಿವಾಗೆ ಟಿಪ್ಪರ್ ಡಿಕ್ಕಿ: 2 ಸಾವು

Spread the love

ಉಡುಪಿ: ಟಿಪ್ಪರ್ ಲಾರಿಯೊಂದು ಏಕಾಎಕಿಯಾಗಿ ಆ್ಯಕ್ಟಿವಾಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಉಡುಪಿಯ ಬೀಡಿನಗುಡ್ಡೆಯಲ್ಲಿ ಶನಿವಾರ ನಡೆದಿದೆ.

IMG-20150502-WA0068

beedinagudde_accident 02-05-2015 09-37-19

ಘಟನೆಯಲ್ಲಿ ಮೃತಪಟ್ಟವರನ್ನು ಭಟ್ಕಳದ ನಾರಾಯಣ ಹಾಗೂ ರಾಮ್ ದಾಸ್ ಎಂಬುದಾಗಿ ಗುರುತಿಸಲಾಗಿದೆ. ರಾಮ್ ದಾಸ್ ಹಾಗೂ ನಾರಾಯಣ ತಮ್ಮ ಆ್ಯಕ್ಟಿವಾದಲ್ಲಿ ಮಣಿಪಾಲದಿಂದ ಭಟ್ಕಲದತ್ತ ಪ್ರಯಾಣಿಸುತ್ತಿದ್ದ ಸಂದರ್ಭ ಬೀಡಿನಗುಡ್ಡೆ ಕ್ರಾಸ್ ಬಳಿ ವೇಗವಾಗಿ ಬಂದ ಟಿಪ್ಪರ್ ಆ್ಯಕ್ಟಿವಾಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಸಮೀಪದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love