ಬೀಯಿಂಗ್ ಸೋಶಿಯಲ್ ತಂಡದಿಂದ ಮಕ್ಕಳಿಗೆ ಕೊಡೆ ವಿತರಣೆ

Spread the love

ಬೀಯಿಂಗ್ ಸೋಶಿಯಲ್ ತಂಡದಿಂದ ಮಕ್ಕಳಿಗೆ ಕೊಡೆ ವಿತರಣೆ

ಉಡುಪಿ: ಬೀಯಿಂಗ್ ಸೋಶಿಯಲ್ ಸಮಾಜ ಸೇವಾ ಸಂಸ್ಥೆಯ ವತಿಯಿಂದ ಉಡುಪಿ ನಗರದ ನಾರ್ತ್ ಶಾಲೆ 65 ಮಕ್ಕಳಿಗೆ ಮಂಗಳವಾರ ಕೊಡೆಗಳನ್ನು ವಿತರಿಸಲಾಯಿತು.

ಈ ವೇಳೆ ಮಾತನಾಡಿದ ಮುಖ್ಯ ಅತಿಥಿ ಉದ್ಯಮಿ ಅಮೃತ್ ಶೆಣೈ ಅವರು ಸಾಮಾಜಿಕ ಕಳಕಳಿಯ ಮೂಲಕ ಸಮಾಜದಲ್ಲಿ ನೋವಿನಲ್ಲಿ ಇರುವವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಹುಟ್ಟಿಕೊಂಡ ಸಂಸ್ಥೆಯೇ ಬೀಯೀಂಗ್ ಸೋಶಿಯಲ್. ಸಂಸ್ಥೆಯ ವತಿಯಿಂದ ಈಗಾಗಲೇ ಹಲವಾರು ಸಮಾಜಪರ ಸೇವೆಗಳನ್ನು ನೀಡಿದ್ದು ಮುಂದೆಯೂ ಸಂಸ್ಥೆ ಅದನ್ನು ಮುಂದುವರಿಸಿಕೊಂಡು ಹೋಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಜನಾರ್ಧನ ಭಂಡಾರ್ಕರ್, ಬೀಯಿಂಗ್ ಸೋಶಿಯಲ್ ತಂಡದ ಮಾರುತಿ ಪ್ರಭು, ನಂದಾ ಪೇಟ್ಕರ್,ಗುರುರಾಜ್ ಸನೀಲ್, ನೀರಜ್ ಪಾಟೀಲ್, ಸ್ಯಾಂಡ್ರಾ ಡಿಸೋಜ, ಶಾಲಾಭಿವೃದ್ಧಿ ಸಮಿತಿಯ ಮೋಹನ್ ನಾಯ್ಕ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love