ಬೆಂಗಳೂರು: ಆಸ್ಕರ್ ಫರ್ನಾಂಡಿಸ್ ನಿಯೋಗದಿಂದ ಐಒಸಿಎಲ್ ಗೆ ನಿಕ್ಷೇಪ ನೀಡುವಂತೆ ಸಿಎಂಗೆ ಮನವಿ

Spread the love

ಬೆಂಗಳೂರು: ಕುದುರೆಮುಖ ಅದಿರು ಕಂಪನಿಗೆ ಅದಿರು ನಿಕ್ಷೇಪ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ನೇತೃತ್ವದ ನಿಯೋಗ ಮಂಗಳವಾರ ಮನವಿ ಸಲ್ಲಿಸಿದೆ.

oscarcm oscarcm1 oscarcm2

ಕುದುರೆಮುಖ ಅದಿರು ಕಂಪನಿ ಪ್ರಸಕ್ತ ಚಾಲ್ತಿಯಲ್ಲಿದ್ದು, ಅಗತ್ಯವಿರುವ ಅದಿರನ್ನು ಹೊರರಾಜ್ಯದಿಂದ ಅಮದು ಮಾಡಿಕೊಳ್ಳುತ್ತಿದೆ. ಇದು ಹೊರೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೆ ಅದಿರು ನಿಕ್ಷೇಪ ನೀಡುವಂತೆ ನಿಯೋಗ ಮನವಿ ಮಾಡಿದೆ. ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು, ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.

ಉಡುಪಿ-ಚಿಕ್ಕಮಗಳೂರು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹಾಗೂ ಕ್ರೀಡಾ ಸಚಿವ ಅಭಯಚಂದ್ರ ಜೈನ್   ನಿಯೋಗದಲ್ಲಿದ್ದರು.


Spread the love