ಬೆದರಿಕೆ ನಡುವೆಯೂ ಶ್ರೀ ಕ್ಷೇತ್ರ ಅಂಬಿಕ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಮೊಯ್ದಿನ್ ಬಾವಾ

Spread the love

ಬೆದರಿಕೆ ನಡುವೆಯೂ ಶ್ರೀ ಕ್ಷೇತ್ರ ಅಂಬಿಕ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಮೊಯ್ದಿನ್ ಬಾವಾ

ಮಂಗಳೂರು: ಬೆದರಿಕೆ ನಡುವೆಯೂ ಶ್ರೀ ಕ್ಷೇತ್ರಕ್ಕೆ ದೇವಸ್ಥಾನದ ಆಡಳಿತ ಮಂಡಳಿಯ ಆಹ್ವಾನದ ಮೇರೆಗೆ ಮತ್ತೊಮ್ಮೆ ಸುರತ್ಕಲ್ ಮಾಜಿ ಶಾಸಕ ಮೊಹಿಯುದ್ದಿನ್ ಬಾವ ಭೇಟಿ ನೀಡಿದರು,

ಇತ್ತೀಚೆಗೆ ಸುಂಕದಕಟ್ಟೆ ಅಂಬಿಕ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಕೊಪ್ಪರಿಗೆಗೆ ಅಕ್ಕಿ ಹಾಕುವ ವಿಚಾರದಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಮೊಹಿಯುದ್ದಿನ್ ಬಾವರವರಿಗೆ ಮುಂಬೈಯಿಂದ ಬೆದರಿಕೆ ಕರೆ ಬಂದು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಪರ ವಿರೋಧ ಚರ್ಚೆಗಳ ನಡುವೆಯೂ ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಮೊಕ್ತೇಸರರಾದ ನಾರಾಯಣ ಎನ್ . ಪೂಜಾರಿಯವರ ಆಹ್ವಾನದ ಮೇರೆಗೆ ಇಂದು ಮತ್ತೊಮ್ಮೆ ದೇವಸ್ಥಾನಕ್ಕೆ ಭೇಟಿ ನೀಡಿದ ಬಾವರವರನ್ನು ಶ್ರೀ ಕ್ಷೇತ್ರದ ಆಡಳಿತ ಮಂಡಳಿ ವತಿಯಿಂದ ಸ್ವಾಗತಿಸಿದರು.

ಶ್ರೀ ಕ್ಷೇತ್ರದ ವತಿಯಿಂದ ಮುಂದಿನ ವರ್ಷ ನಡೆಯುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಬಾವರವರಿಗೆ ಇದೇ ಸಂದರ್ಭದಲ್ಲಿ ಆಹ್ವಾನ ನೀಡಿದರು.

ಶ್ರೀ ಕ್ಷೇತ್ರ ಅಂಬಿಕ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಮೊಹಿಯುದ್ದಿನ್ ಬಾವರವರು ವೈಯುಕ್ತಿಕವಾಗಿ ದೇಣಿಗೆ ನೀಡಿ , ಬೆದರಿಕೆ ಕರೆ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರಿಗೆ ದೇವರು ಒಳ್ಳೆಯ ಸದ್ಬುದ್ಧಿಯನ್ನು ನೀಡಲಿ ಎಂದು ಇದೇ ಸಂಧರ್ಭದಲ್ಲಿ ಬಾವರವರು ಪ್ರಾರ್ಥಿಸಿದರು.


Spread the love