Spread the love
ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿಯಾಗಿ ಸಿ.ಕೆ ರೋಹಿಣಿ ನೇಮಕ
ಬೆಳ್ತಂಗಡಿ: ರಾಜ್ಯ ಸರಕಾರ ಹೊಸದಾಗಿ ಬೆಳ್ತಂಗಡಿ ಪೊಲೀಸ್ ಉಪವಿಭಾಗವನ್ನು ಘೋಷಿಸಿದ್ದು, ಬೆಳ್ತಂಗಡಿ ಉಪ ವಿಭಾಗಕ್ಕೆ ಸಿ.ಕೆ ರೋಹಿಣಿ ಅವರನ್ನು ಡಿವೈಎಸ್ಪಿ ಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಹೊಸದಾಗಿ ಬೆಳ್ತಂಗಡಿ ಉಪವಿಭಾಗಕ್ಕೆ ಡಿವೈಎಸ್ಪಿಯಾಗಿ ಬೆಂಗಳೂರು ವೈಟ್ ಫೀಲ್ಡ್ ಸೆನ್ ಡಿವೈಎಸ್ಪಿಯಾಗಿರುವ ಸಿ.ಕೆ.ರೋಹಿಣಿ ಅವರನ್ನು ನೇಮಕ ಮಾಡಿ ನ.4 ರಂದು ಸರಕಾರ ಆದೇಶ ಹೊರಡಿಸಿದೆ.
ಡಿವೈಎಸ್ಪಿ ಸಿ.ಕೆ.ರೋಹಿಣಿ 2022 ರ ಬ್ಯಾಚ್ ನಲ್ಲಿ ನೇರ ನೇಮಕವಾದ ಡಿವೈಎಸ್ಪಿಯಾಗಿದ್ದಾರೆ.
ಬೆಳ್ತಂಗಡಿ ಉಪ ವಿಭಾಗದ ವ್ಯಾಪ್ತಿಗೆ ಬೆಳ್ತಂಗಡಿ ತಾಲೂಕಿನ ಐದು ಪೊಲೀಸ್ ಠಾಣೆಗಳು ಬರಲಿದೆ.
Spread the love













