ಬೆಳ್ತಂಗಡಿ: ಬೈಕ್, ಕಾರು ಕಳ್ಳತನ‌ ಪ್ರಕರಣ; ಮೂರು ಮಂದಿ ಆರೋಪಿಗಳ ಬಂಧನ

Spread the love

ಬೆಳ್ತಂಗಡಿ: ಬೈಕ್, ಕಾರು ಕಳ್ಳತನ‌ ಪ್ರಕರಣ; ಮೂರು ಮಂದಿ ಆರೋಪಿಗಳ ಬಂಧನ
 
ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮೂರು ಬೈಕ್ ಹಾಗೂ ಒಂದು ಕಾರು ಕಳ್ಳತನ‌ ಪ್ರಕರಣದ ಆರೊಪಿಗಳನ್ನು ಬಂಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳು ಹಾಸನ, ಹೊಸ ಲೈನ್ ರಸ್ತೆ ನಿವಾಸಿ ನಂದನ ಗೌಡ ಕೆ.ಡಿ (21) ಹಾಸನ ಹೇಮಾವತಿ ಆಸ್ಪತ್ರೆ ಬಳಿ ನಿವಾಸಿ ಹೇಮಂತ್ (20), ಹಾಗೂ ಹರ್ಷಿತ್ ಕುಮಾರ್ (19) ಎಂದು ಪೊಲೀಸರು ತಿಳಿಸಿದ್ದಾರೆ

ಧರ್ಮಸ್ಥಳ ಗ್ರಾಮದಿಂದ ಫೆ.24ರಂದು ರಾತ್ರಿ ವೇಳೆ ಮೂರು ಬೈಕ್ ಗಳು ಕಳ್ಳತನವಾಗಿತ್ತು. ಇದಾದ ಬಳಿಕ ಮಾ.1ರಂದು ಕೊಕ್ಕಡದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರು ಕಳ್ಳತನವಾಗಿತ್ತು. ಕಳ್ಳತನ ಪ್ರಕರಣದ‌ ಬೆನ್ನು ಹತ್ತಿದ ಪೊಲೀಸರು ಇದೀಗ ಹಾಸನದಿಂದ ಮೂವರು ಆರೋಪಿಗಳನ್ನು ಬಂಧಿಸಿದ್ದು, ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳಿಂದ ಕಳ್ಳತನ ಮಾಡಲಾಗಿದ್ದ ಮೂರು ಬೈಕ್ ಗಳನ್ನು ಹಾಗೂ ಮಾರುತಿ ಕಾರನ್ನು ವಶಪಡಿಸಿಕೊಳ್ಳ ಲಾಗಿದೆ. ಪೊಲೀಸರು ಪ್ರಕರಣದ‌ ಬಗ್ಗೆ ಹೆಚ್ವಿನ ತನಿಖೆ ನಡೆಸುತ್ತಿದ್ದಾರೆ.


Spread the love