ಬೆಳ್ತಂಗಡಿ: ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಡುತ್ತಿದ್ದ ಐವರ ಬಂಧನ

Spread the love

ಬೆಳ್ತಂಗಡಿ: ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಡುತ್ತಿದ್ದ ಐವರ ಬಂಧನ

ಬೆಳ್ತಂಗಡಿ: ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಟ ಆಡುತ್ತಿದ್ದ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಗುರುವಾಯನಕೆರೆ ಯ ಫಾರೂಕ್, ಪಣೆಜಾಲಿನ ಪ್ರಸನ್ನ,ಬೆಳಾಲಿನ ಯಾಕೂಬ್,ಗೋವಿಂದೂರಿನ ಸುಧಾಕರ ಶೆಟ್ಟಿ ,ರೋಹಿತ್ ಜಾರಿಗೆಬೈಲ್ ಎಂದು ಗುರುತಿಸಲಾಗಿದೆ.

ಬೆಳ್ತಂಗಡಿ ಪೊಲೀಸ್ ಉಪನಿರೀಕ್ಷಕರು ತಮ್ಮ ಠಾಣಾ ಸಿಬ್ಬಂದಿ ಗಳೊಂದಿಗೆ ಬೆಳ್ತಂಗಡಿ ಪೊಲೀಸು ಠಾಣಾ ಸರಹದ್ದಿನ ಬೆಳ್ತಂಗಡಿ ತಾಲೂಕು ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಟ ಆಡುತಿದ್ದಲ್ಲಿಗೆ ದಾಳಿ ನಡೆಸಿ 5 ಆರೋಪಿಗಳನ್ನು ವಶಕ್ಕೆ ಪಡೆದು ಆರೋಪಿ ಗಳಿಂದ ರೂ 1, 03, 370/- ನಗದನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ

ದಾಳಿ ಸಮಯ ಇತರ 4 ಜನ ತಪ್ಪಿಸಿಕೊಂಡಿರುತ್ತಾರೆ.

 


Spread the love